Gruha lakshmi amount : ನಮಸ್ಕಾರ ಸ್ನೇಹಿತರೆ, ಇವತ್ತು ನಾವು ನಿಮಗೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಒಂದು ದೊಡ್ಡ ಸುದ್ದಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗೃಹಲಕ್ಷ್ಮಿ ಯೋಜನೆಯಿಂದ ಫಲಾನುಭವಿ ಮಹಿಳೆಯರು ಇಲ್ಲಿಯ ವರೆಗೆ 11 ಕಂತುಗಳ ತನಕ ರೂ.2000ವನ್ನು ಪಡೆದಿದ್ದಾರೆ. ಈಗ 12ನೇ ಹಣ ಯಾವಾಗ ಜಮಾ ಆಗುತ್ತದೆ ಅಂತ ಕಾಯುತ್ತಿದ್ದಾರೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಕಳೆದ ಎರಡು ಅಥವಾ ಮೂರು ಕಂತುಗಳ ಹಣ ಖಾತೆಗೆ ಜಮಾ ಆಗಿಲ್ಲ ಇನ್ನೂ ಪೆಂಡಿಂಗ್ ಇದೆ. ಕಾಂಗ್ರೆಸ್ ಸರ್ಕಾರ ಈ ರೀತಿ ಎರಡರಿಂದ ಮೂರು ಕಂತುಗಳ ಹಣ ಪೆಂಡಿಂಗ್ ಇರುವ ಫಲಾನುಭವಿ ಮಹಿಳೆಯರಿಗೆ ದೊಡ್ಡ ಶಾಕ್ ನೀಡಿದೆ ಅದರ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.
ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ಗೃಹಲಕ್ಷ್ಮಿ ಯೋಜನೆಯ ಸುಮಾರು 2 ಲಕ್ಷದ ವರೆಗಿನ ಫಲಾನುಭವಿ ಮಹಿಳೆಯರಿಗೆ ರೂ.2000 ಬಂದ್ ಮಾಡಲಾಗುತ್ತದೆ ಎಂದು ಮಾಹಿತಿ ಬಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣವು ಬಹು ದೊಡ್ಡ ಹೊರೆಯಾಗಿದೆ. ಅಂತದರಲ್ಲಿ ಕೆಲವರು ಈ ಯೋಜನೆಗೆ ನಿಗದಿಪಡಿಸಿದ ಅರ್ಹತೆಗಳು ಹೊಂದಿರದೆ ಇದ್ದರೂ, ಯೋಜನೆಗೆ ಅರ್ಜಿ ಹಾಕಿ ಹಣವನ್ನು ಪಡೆಯುತ್ತಿದ್ದಾರೆ. ಇಂತವರನ್ನು ಗಮನಿಸಿ ಸರ್ಕಾರವು ಇದರ ಬಗ್ಗೆ ಕ್ರಮವನ್ನು ಕೈಗೊಂಡಿದೆ. ಇಂತವರಿಗೆ ಇನ್ನು ಮುಂದೆ ಗೃಹ ಲಕ್ಷ್ಮಿ ಹಣ ಬರುವುದಿಲ್ಲ ಎಂದು ತಿಳಿಸಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಒಂದು ಕೊನೆಯ ದಿನ! ಮೊಬೈಲಲ್ಲಿ ಉಚಿತವಾಗಿ ಈ ರೀತಿ ಅಪ್ಡೇಟ್ ಮಾಡಿಕೊಳ್ಳಿ!
ರಾಜ ಸರ್ಕಾರವು ಈ ರೀತಿ ಗೃಹ ಲಕ್ಷ್ಮಿ ಯೋಜನೆಯಿಂದ ಅನರ್ಹ ಮಹಿಳೆಯರನ್ನು ತೆಗೆದುಹಾಕಲು ಕಾರಣವೇನು, ಗೃಹ ಲಕ್ಷ್ಮಿ ಯೋಜನೆಯ ಹಣ ನಿಮಗೆ ಮುಂದೆ ಬರುತ್ತದೆಯೋ ಎಲ್ಲವನ್ನು ಹೇಗೆ ತಿಳಿದುಕೊಳ್ಳಬೇಕು ಮತ್ತು ನಿಮಗೆ ಗೃಹಲಕ್ಷ್ಮಿ ಹಣ ಬಂದ್ ಆಗದೇ ಇರಲು ಏನು ಮಾಡಬೇಕು ಅನ್ನುವ ಮಾಹಿತಿ ಇಲ್ಲಿದೆ.
ಓದುಗರೇ, ನೀವು ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದು, ಪ್ರತಿದಿನ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರವು ನೀಡುವ ಅಪ್ಡೇಟ್ ಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆ ವಿವರ (Gruha lakshmi amount) :
ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರ ಹಿಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಯೋಜನೆಗಳನ್ನು ಜನರಿಗೆ ನೀಡುತ್ತೇವೆ ಎಂದು ಪ್ರಚಾರ ಮಾಡಿತ್ತು, ಅದರಂತೆಯೇ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಇದಾದ ನಂತರ ಜನರು ಯೋಜನೆಗಳ ಬೇಡಿಕೆಯನ್ನು ಸರ್ಕಾರಕ್ಕೆ ಇಟ್ಟರು. ಜನರ ಬೇಡಿಕೆಗಳಿಗೆ ಬಗ್ಗಿದ ಸರ್ಕಾರವು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲೇ ಬೇಕಾಯಿತು.
ಅದರಂತೆ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿನ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ ಪ್ರತಿಯೊಂದು ಕುಟುಂಬದ ಮುಖ್ಯಸ್ಥ ಮಹಿಳೆಗೆ ಪ್ರತಿ ತಿಂಗಳು 2000 ಹಣವನ್ನು ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವೂ ಯಶಸ್ವಿಯಾಗಿ ಜಾರಿಗೆ ತಂದಿತು ಮತ್ತು ಯೋಜನೆಯನ್ನು ಮುಂದುವರೆಸಿಕೊಂಡು ಹೋಯಿತು.
ಕಾಂಗ್ರೆಸ್ ಸರ್ಕಾರ ಗೃಹಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದ ಸಮಯದಲ್ಲಿ ಮಹಿಳೆಯರಿಗೆ ಅರ್ಜಿ ಹಾಕಲು ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಿತು. ಆದರೆ ಹಲವು ಮಹಿಳೆಯರು ಈ ನಿಗದಿಪಡಿಸಿದ ಅರ್ಹತೆಗಳು ಹೊಂದಿರದೆ ಇದ್ದರೂ ಕೂಡ ಅರ್ಜಿ ಸಲ್ಲಿಸಿ ಇಲ್ಲಿಯ ತನಕ ಸುಮಾರು 8 ರಿಂದ 9 ಕಂತುಗಳ ಹಣವನ್ನು ಪಡಿಡಿದ್ದಾರೆ. ಇಂತಹ ಅನರ್ಹ ಮಹಿಳೆಯರನ್ನು ಗಮನಿಸಿದ ಸರ್ಕಾರವು ಈಗ ಇಂತವರ ವಿರುದ್ಧ ಕ್ರಮ ಕೈಗೊಂಡಿದೆ. ಇಂಥವರಿಗೆ ಗೃಹಲಕ್ಷ್ಮಿ ಹಣವನ್ನು ಸಂಪೂರ್ಣವಾಗಿ ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಸುಮಾರು 2 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್ :
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯದಲ್ಲಿನ ಬಡ ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಆದ ಕಾರಣ ಈ ಯೋಜನೆಗೆ ಆದಾಯ ತೆರಿಗೆಯನ್ನು ಕಟ್ಟುತ್ತಿರುವವರು ಅರ್ಜಿ ಹಾಕುವ ಹಾಗೆ ಅಲ್ಲ ಎಂದು ಸರ್ಕಾರವು ತಿಳಿಸಿತ್ತು. ಸರ್ಕಾರವು ನಿಗದಿಪಡಿಸಿರುವ ಅರ್ಹತೆಯನ್ನು ಮೀರಿ, ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರುವ ಕುಟುಂಬದ ಮಹಿಳೆಯರು ಅರ್ಜಿ ಹಾಕಿ ಯೋಜನೆಯ ಮೂಲಕ ಹಣವನ್ನು ಪಡೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಸುಮಾರು 1.2 ಕೋಟಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಿ, ಹಣವನ್ನು ಪಡೆಯುತ್ತಿದ್ದಾರೆ. ಅದರಲ್ಲಿ ಸರ್ಕಾರ ಗುರುತಿಸಿರುವ ಪ್ರಕಾರ ಸುಮಾರು 2 ಲಕ್ಷ ಮಹಿಳೆಯರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದಾರೆ ಇಂತಹ ಮಹಿಳೆಯರಿಗೆ ಇನ್ನು ಮುಂದೆ ಗೃಹ ಲಕ್ಷ್ಮಿ ಹಣ ಬರುವುದಿಲ್ಲ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದರ ಬಗ್ಗೆ ಹೀಗೆ ಹೇಳಿದ್ದಾರೆ “ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯದಲ್ಲಿನ ಬಡ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡಬಹುದು ದೇಶದಿಂದ ಜಾರಿಗೆ ತರಲಾಗಿದೆ. ಆದರೆ ಬಹಳ ಅನರ್ಹ ಮಹಿಳೆಯರು ಯೋಜನೆಯ ಹಣವನ್ನು ಪಡೆಯುತ್ತಿದ್ದಾರೆ ನಾವು ಇಂತಹ ಅನರ್ಹ ಮಹಿಳೆಯರ ಪಟ್ಟಿಯನ್ನು ಮಾಡಿದ್ದು ಇನ್ನು ಮುಂದೆ ನಿಂತವರಿಗೆ ಗೃಹಲಕ್ಷ್ಮಿ ಹಣ ನೀಡಲಾಗುವುದಿಲ್ಲ” ಎಂಬ ವಿಷಯ ಹಂಚಿಕೊಂಡಿದ್ದಾರೆ.
ನಿಮಗೆ ಗೃಹ ಲಕ್ಷ್ಮಿ ಹಣ ಬರುತ್ತದೆಯಾ ಎಂದು ಹೇಗೆ ಚೆಕ್ ಮಾಡಬೇಕು?
ರಾಜ್ಯದಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಂದ್ ಮಾಡಲಾಗುತ್ತದೆ ಎಂದು ಸರ್ಕಾರವು ತಿಳಿಸಿದೆ. ಈಗಾಗಲೇ ದಾಯ ತೆರಿಗೆಯನ್ನು ಮತ್ತು ಐಟಿಆರ್‌ಗಳನ್ನು ನೀಡುತ್ತಿರುವ ಕುಟುಂಬದ ಮಹಿಳೆಯರ ಪಟ್ಟಿಯನ್ನು ಸಿದ್ಧತೆ ಮಾಡಿದ್ದು ಇಂಥವರ ಗೃಹ ಲಕ್ಷ್ಮಿ ಯೋಜನೆಯ ಸ್ಥಿತಿಯನ್ನು ರಿಜೆಕ್ಟ್ ಮಾಡಲಾಗಿದೆ. ಈ ರೀತಿ ಮಾಡುವಾಗ ಕೆಲವೊಂದು ಅರ್ಹ ಮಹಿಳೆಯರ ಹೆಸರು ಕೂಡ, ಅನರ್ಹ ಮಹಿಳೆಯರ ಪಟ್ಟಿಯಲ್ಲಿ ಸೇರಿಕೊಂಡಿರುತ್ತದೆ. ಹಾಗಾಗಿ ಯಾವುದೇ ಆದಾಯ ತೆರಿಗೆ ಕಟ್ಟದ ಮತ್ತು ಐಟಿ ರಿಟರ್ನ್ ಕಟ್ಟದ ಮಹಿಳೆಯರ ಗೃಹ ಲಕ್ಷ್ಮಿ ಹಣವು ಕೂಡ ಬಂದಾಗಿದೆ. ಇಂತಹ ಮಹಿಳೆಯರು ನಾವು ಕೆಳಗೆ ನೀಡಿದ ವಿಚಾರಗಳನ್ನು ಅನುಸರಿಸಿ ನಿಮ್ಮ ಹೆಸರು ಆದಾಯ ತೆರಿಗೆ ವಾದ್ಯ ಮಾಡುವ ಅನರ್ಹ ಮಹಿಳೆಯರ ಪಟ್ಟಿಯಲ್ಲಿ ಸೇರಿದೆ ಎಂದು ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅನ್ನುವ ಮಾಹಿತಿ ಇಲ್ಲಿದೆ.
ಸ್ನೇಹಿತರೆ ನಿಮ್ಮ ಕುಟುಂಬದ ಮಹಿಳೆಯರ ಹೆಸರು ಆದಾಯ ತೆರಿಗೆ ಪಾವತಿ ಮಾಡುವ ಮಹಿಳೆಯರ ಪಟ್ಟಿಯಲ್ಲಿ ಸೇರಿದೆ ಎಂದು ಚೆಕ್ ಮಾಡಿಕೊಳ್ಳಲು ನೀವು ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಸೆಂಟರ್ ಗಳಿಗೆ ಭೇಟಿ ನೀಡಿ, ನಿಮ್ಮ ಗ್ರಹಲಕ್ಷ್ಮಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕು.
ನಿಮ್ಮ ಕುಟುಂಬದ ಮಹಿಳೆಗೆ 2 ಅಥವಾ 3 ಕಂತುಗಳ ಹಣ ಪೆಂಡಿಂಗ್ ಇದ್ದರೆ ಕಡ್ಡಾಯವಾಗಿ ಚೆಕ್ ಮಾಡಿಸಿ. ಏಕೆಂದರೆ 2 ರಿಂದ 3 ಕಂತುಗಳ ಹಣ ಜಮ ಆಗದೇ ಇರುವ ಮಹಿಳೆಯರ ಗೃಹ ಲಕ್ಷ್ಮಿ ಅರ್ಜಿ ರಿಜೆಕ್ಟ್ ಮಾಡಲಾಗಿದೆ. ನೀವು ಯಾವುದೇ ಆದಾಯ ತೆರಿಗೆ ಪಾವತಿ ಮಾಡುತ್ತಿಲ್ಲ ಅಂದರು ಅರ್ಜಿಯನ್ನು ರಿಜೆಕ್ಟ್ ಮಾಡಲಾಗಿದೆ ಅಂದರೆ ಏನು ಮಾಡಬೇಕು ಅನ್ನುವ ಮಾಹಿತಿ ಕೆಳಗೆ ನೀಡಲಾಗಿದೆ.
2 ರಿಂದ 3 ಕಂತಿನ ಗೃಹ ಲಕ್ಷ್ಮಿ ₹2000 ಹಣ ಬಂದಿಲ್ಲ : ಹೀಗೆ ಮಾಡಿ.
ಸ್ನೇಹಿತರ ನಾವು ಮೇಲೆ ಹೇಳಿದಾಗ ಗೃಹ ಲಕ್ಷ್ಮಿ ಯೋಜನೆಯಿಂದ ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಸುಮಾರು 2 ಲಕ್ಷ ತನಕ ಮಹಿಳೆಯರ ಅರ್ಜಿಯನ್ನು ರಿಜೆಕ್ಟ್ ಮಾಡಲಾಗುತ್ತಿದೆ. ಈಗಾಗಲೇ ಇಂತಹ ಮಹಿಳೆಯರ ಪಟ್ಟಿ ತಯಾರಿಸಿ ಅರ್ಜಿಯನ್ನು ರಿಜೆಕ್ಟ್ ಮಾಡಲಾಗಿದೆ. ಇದರಲ್ಲಿ ನೀವು ಆದಾಯ ತೆರಿಗೆ ಪಾವತಿ ಮಾಡದೇ ಇದ್ದರೂ ಕೂಡ, ಮಿಸ್ ಆಗಿ ಸೇರಿಕೊಂಡಿದ್ದರೆ, ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ. ನಂತರ ಅಲ್ಲಿ ನೀವು ಆದಾಯ ತೆರಿಗೆ ಪಾವತಿ ಮಾಡುತ್ತಿಲ್ಲ ಎಂದು ನಿಗದಿಪಡಿಸುವ ದಾಖಲೆಗಳನ್ನು ನೀಡಿ ನಿಮ್ಮ ಗೃಹ ಲಕ್ಷ್ಮಿ ಅರ್ಜಿಯನ್ನು ಚಾಲ್ತಿಗೊಳಿಸಬೇಕು.ನಂತರ ನಿಮಗೆ ₹2000 ಹಣ ಬರುತ್ತದೆ.
ವಾಟ್ಸಾಪ್ ಗ್ರೂಪ್ ಲಿಂಕ್ – https://chat.whatsapp.com/KGDCXFjnjPU4usSKVXrxKo