Ganga Kalyana yojana 2024 : ನಮಸ್ಕಾರ ಲೇಖನಕ್ಕೆ ಭೇಟಿ ನೀಡಿದ ತಮ್ಮೆಲ್ಲರಿಗೂ. ಇವತ್ತಿನ ಲೇಖನದಲ್ಲಿ ನಿಮ್ಮ ತಿಳಿಸುತ್ತಿರುವ ಮಾಹಿತಿ ಗಂಗಾ ಕಲ್ಯಾಣ ಯೋಜನೆಯ ಕುರಿತು. ಗಂಗಾ ಕಲ್ಯಾಣ ಯೋಜನೆಯ ಮೂಲಕ ದೇಶದಲ್ಲಿನ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತೆರೆದ ಬಾವಿ ಅಥವಾ ಕೊಳವೆ ಬಾವಿ ನಿರ್ಮಾಣ ಮಾಡಲು ಸರ್ಕಾರವು ಸಬ್ಸಿಡಿ ಹಣವನ್ನು ನೀಡುತ್ತಿದೆ. ಈ ಗಂಗಾ ಕಲ್ಯಾಣ ಯೋಜನೆಯ ಅರ್ಜಿ ಆರಂಭವಾಗಿದ್ದು, ಈ ಯೋಜನೆಗೆ ಅರ್ಜಿ ಹಾಕಲು ಸೆಪ್ಟೆಂಬರ್ 18 ಕೊನೆಯ ದಿನಾಂಕವಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ ಹೇಗೆ ಯೋಜನೆಯ ಲಾಭವನ್ನು ಪಡೆಯಬೇಕು ಅನ್ನುವ ಮಾಹಿತಿಯ ಬಗ್ಗೆ ಈ ಲೇಖನವನ್ನು ನಿಮಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.
ಹೌದು ಸ್ನೇಹಿತರೆ, ದೇಶದಲ್ಲಿ ಮಳೆಯ ನೀರನ್ನು ಆಧರಿಸಿ ಕೃಷಿಯನ್ನು ಮಾಡುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಇದು ನಮಗೆ ಗೊತ್ತಿರುವ ವಿಷಯ. ಇವರಿಗೆ ಮಳೆಯನ್ನು ಆಧರಿಸಿ ಕೃಷಿ ಮಾಡಲು ಬಹಳ ಸಂಕಷ್ಟಗಳು ಎದುರಾಗುತ್ತವೆ. ರೈತರಿಗೆ ಬೇಕಾದಾಗ ಮಳೆ ಬರದೇ ನೀರಿಲ್ಲದೆ ಬೆಳೆಗಳು ನಾಶವಾಗುತ್ತವೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹಲವು ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಇಂತಹ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಬೆಳೆಗಳನ್ನು ಬೆಳೆಯಲು ಒಂದು ನೀರಿನ ಮೂಲವನ್ನು ನಿರ್ಮಿಸಿ ಕೊಡಬೇಕು ಅನ್ನುವ ಉದ್ದೇಶದಿಂದ ಈ ಗಂಗಾ ಕಲ್ಯಾಣ ಯೋಜನೆಯಿಂದ ಸಬ್ಸಿಡಿ ಮೂಲಕ ಕೊಳವೆ ಬಾವಿ ಮತ್ತು ತೆರೆದ ಬಾವಿಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ.
ಸ್ನೇಹಿತರೆ ನಮ್ಮ ಮಾಧ್ಯಮ ಇದೆ ರೀತಿ ರೈತರಿಗೆ ಉಪಯೋಗವಾಗುವ ಸರ್ಕಾರದಿಂದ ನೀಡಲಾಗುವ ಹಲವು ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಮಗೆ ನೀಡುತ್ತದೆ. ಆದ್ದರಿಂದ ಇಂತಹ ಮಾಹಿತಿಗಳನ್ನು ಮುಂದೆ ನೀವು ಪಡೆಯಲು ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಳ್ಳಿ ಮತ್ತು ನೀಡಿರುವ ವಾಟ್ಸಪ್ ಗ್ರೂಪಿಗೆ ಜಾಯಿನ್ ಮಾಡಿಕೊಳ್ಳಿ.
ಗಂಗಾ ಕಲ್ಯಾಣ ಯೋಜನೆ :
ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಸಣ್ಣ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಕೃಷಿಗೆ ನೀರಿನ ಒಂದು ಮೂಲವನ್ನು ನಿರ್ಮಾಣ ಮಾಡಿಕೊಡಲು ಸರ್ಕಾರವು ಮುಂದಾಗಿದೆ. ಇಂತಹ ನೀರಿನ ತೊಂದರೆ ಇರುವ ಮಳೆಗೆ ಆಧಾರವಾಗಿ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಗಂಗಾ ಕಲ್ಯಾಣ ಯೋಜನೆಯ (Ganga Kalyana yojana 2024) ಮೂಲಕ ತೆರೆದ ಬಾವಿ ಅಥವಾ ಕೊಳವೆ ಬಾವಿಯನ್ನು ಸಬ್ಸಿಡಿ ನೀಡುವ ಮೂಲಕ ಸರ್ಕಾರದಿಂದ ರೈತರಿಗೆ ಅವರ ಜಮೀನಿನಲ್ಲಿ ನಿರ್ಮಾಣ ಮಾಡಿಕೊಡಲಾಗುತ್ತದೆ.
ರೈತರ ನೀವು ಏನಾದರೂ ಇದೇ ರೀತಿ ನಿಮ್ಮ ಭೂಮಿಯಲ್ಲಿ ನೀರಿನ ತೊಂದರೆ ಇದೆ? ನೀವು ಕೂಡ ಮಳೆಯನ್ನೇ ಆಧರಿಸಿ ಬೆಳೆಗಳನ್ನು ಬೆಳೆಯುತ್ತಿದ್ದೀರಾ? ಯಾವುದೇ ರೀತಿಯ ಕಾಲುವೆ ನೀರಾವರಿ ನಿಮ್ಮ ಜಮೀನಿನಲ್ಲಿ ಇಲ್ಲವಾ? ಹಾಗಾದರೆ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಓದಲೇಬೇಕು. ಏಕೆಂದರೆ ಈ ಒಂದು ಗಂಗಾ ಕಲ್ಯಾಣ ಯೋಜನೆಗೆ (Ganga Kalyana yojana 2024) ಅರ್ಜಿ ಹಾಕುವ ಮೂಲಕ ನೀವು ನಿಮ್ಮ ಜಮೀನಿನಲ್ಲಿ ಉಚಿತವಾಗಿ ಸರ್ಕಾರದಿಂದ ತೆರೆದ ಬಾವಿ ಅಥವಾ ಕೊಳವೆ ಬಾವಿಯನ್ನು ನಿರ್ಮಾಣ ಮಾಡಿಕೊಳ್ಳಬಹುದು. ಇದರಿಂದ ನೀವು ಹೆಚ್ಚಿನ ಮತ್ತು ಉತ್ತಮವಾದ ಬೆಳೆಯನ್ನು ಬೆಳೆಯಲು ಸಹಾಯವಾಗುತ್ತದೆ.
ಈ ಯೋಜನೆಯು ಯಾರಿಗೆ ನೀಡಲಾಗುತ್ತದೆ ಮತ್ತು ಗಂಗಾ ಕಲ್ಯಾಣ ಯೋಜನೆ ಅರ್ಜಿ ಹಾಕುವ ದಿನಾಂಕ ಯಾವುದು ಹಾಗೂ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಏನೇನು ಅನ್ನುವ ಎಲ್ಲಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಗಂಗಾ ಕಲ್ಯಾಣ ಯೋಜನೆ ಸಬ್ಸಿಡಿ ಹಣ ಎಸ್ಟು :
ರೈತರೇ ನಿಮಗೆ ಈ ಒಂದು ಯೋಜನೆಯ ಮೂಲಕ ಸರ್ಕಾರದಿಂದ ನಿಮ್ಮ ಜಮೀನಿನಲ್ಲಿ ಕೊಳವೆ ಬಾವಿ ಅಥವಾ ತೆರೆದ ಬಾವಿಯನ್ನು ಸಬ್ಸಿಡಿ ಹಣ ನೀಡುವ ಮೂಲಕ ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಯಿಂದ ನಿಮಗೆ ಕೊಳವೆ ಬಾವಿಯನ್ನು ಕೊರೆಸಿ ಅದಕ್ಕೆ ಪಂಪ್ ಸೆಟ್ ಅಳವಡಿಸಿ, ಬೇಕಾಗುವ ವಿದ್ಯುತ್ ಸಂಪರ್ಕ ಎಲ್ಲವನ್ನೂ ಉಚಿತವಾಗಿಯೇ ಮಾಡಿಕೊಡಲಾಗುತ್ತದೆ.
ಈ ಒಂದು ಯೋಜನೆಯ ಮೂಲಕ ಹಳ್ಳಿಗಳಲ್ಲಿರುವ ಗಂಗಾ ಕಲ್ಯಾಣ ಯೋಜನೆಯಲ್ಲಿ (Ganga Kalyana yojana 2024) ಆಯ್ಕೆಯಾಗಿರುವ ರೈತರಿಗೆ 1.5 ಲಕ್ಷದ ತನಕ ಎಲ್ಲಾ ಅಳವಡಿಕೆಗೆ ಹಣ ನೀಡಲಾಗುತ್ತದೆ ಮತ್ತು ನಗರಗಳಲ್ಲಿರುವ ರೈತರಿಗೆ ಈ ಯೋಜನೆಯ ಮೂಲಕ 3.5 ಲಕ್ಷದ ವರೆಗೆ ಸಬ್ಸಿಡಿ ಹಣ ನೀಡಲಾಗುತ್ತದೆ.
ರಾಜ್ಯದಲ್ಲಿನ 3 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಆಹಾರ ಇಲಾಖೆ ಕ್ರಮ! ರದ್ದು ಮಾಡಿದ ರೇಷನ್ ಕಾರ್ಡ್ ಲಿಸ್ಟ್!
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕಲು ಅರ್ಹತೆಗಳು :
- ಅರ್ಜಿ ಹಾಕುವ ರೈತರು ಈ ಹಿಂದೆ ಈ ರೀತಿ ನೀರಾವರಿ ಯೋಜನೆಗಾಗಿ ಸರ್ಕಾರದಿಂದ ಸಬ್ಸಿಡಿ ಪಡೆದಿರಬಾರದು.
- ಅರ್ಜಿ ಹಾಕುವ ರೈತ 18 ರಿಂದ 55 ವರ್ಷ ವಯಸ್ಸಿನ ಒಳಗೆ ಇರಬೇಕು ಮತ್ತು ಕರ್ನಾಟಕದವರೇ ಆಗಿರಬೇಕು.
- ರೈತರ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕೆಳಗೆ ಇರಬೇಕು (ಗ್ರಾಮೀಣ ರೈತರಿಗೆ).
- ಅರ್ಜಿ ಹಾಕುವ ರೈತ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
- ಈ ಯೋಜನೆಯನ್ನು ಒಂದು ಕುಟುಂಬದಲ್ಲಿ ಒಬ್ಬ ರೈತ ಮಾತ್ರ ಪಡೆಯಬಹುದು.
- ಅರ್ಜಿ ಹಾಕಲು ರೈತರ ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್ ಇರಬೇಕು.
ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವ ರೈತರು ಕೆಳಗಿನ ದಾಖಲೆಗಳನ್ನು ತೆಗೆದುಕೊಂಡು ಕೊಟ್ಟಿರುವ ಲಿಂಕ್ ಬಳಸಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕಲು ದಾಖಲೆಗಳು :
- ಫೋನ್ ನಂಬರ್
- ರೈತರ ಆಧಾರ್ ಕಾರ್ಡ್
- ರೈತರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೈತರ ಬ್ಯಾಂಕ್ ಪಾಸ್ ಬುಕ್
- ರೈತರ ಭೂಮಿಗೆ ಸಂಬಂಧಪಟ್ಟ ದಾಖಲೆಗಳು
- ರೈತರ ನೀರಾವರಿಗೆ ಸಂಬಂಧಿಸಿದ ದಾಖಲೆಗಳು
- ಇನ್ನಿತರ ಜಮೀನಿಗೆ ಸಂಬಂಧಿಸಿದ ದಾಖಲೆಗಳು
ಈ ಎಲ್ಲಾ ದಾಖಲೆಗಳು ಹೊಂದಿರುವ ರೈತರು ಕೆಳಗೆ ನೀಡಿದ ಲಿಂಕ್ ಬಳಸಿ ಯೋಜನೆಗೆ ಅರ್ಜಿ ಹಾಕಿ ಪಡೆದ ಅರ್ಜಿಯ ಸಲ್ಲಿಸಿದ ಮಾಹಿತಿಯನ್ನು ಮತ್ತು ಎಲ್ಲಾ ದಾಖಲೆಗಳನ್ನು ನಕಲಿ ಪ್ರತಿ ಜೋಡಿಸಿ ನಿಮ್ಮ ರೈತ ಸಂಪರ್ಕ ಕೇಂದ್ರಕ್ಕೆ ನೀಡಬೇಕು. ನಂತರ ರೈತರನ್ನು ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆ ಅರ್ಜಿ ಹೇಗೆ ಹಾಕಬೇಕು…?
•ಮೇಲೆ ನೀಡಿದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕುವ ಲಿಂಕ್ ಮೇಲೆ ಒತ್ತಿರಿ.
•ನಂತರ ನಿಮ್ಮ ಮೊಬೈಲ್ ನಂಬರ್ ಕೇಳುತ್ತದೆ ಅದನ್ನು ಹಾಕಿ ಸಲ್ಲಿಸಿ ಎಂದು ಒತ್ತಿರಿ.
•ನಂತರ ಡಿಜಿ ಲಾಕರ್ ಓಪನ್ ಆಗುತ್ತದೆ. ಅಲ್ಲಿ ರೈತರ ಆಧಾರ್ ಕಾರ್ಡ್ ನಂಬರ್ ಹಾಕಿ, ಕೊಟ್ಟಿರುವ captcha ಎಂಟರ್ ಮಾಡಿ.
•ನಂತರ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ನಂಬರ್ ಗೆ OTP ಬರುತ್ತದೆ, ಅದನ್ನು ಹಾಕಿ continue ಅಂತ ಕೊಡಿ.
•ನಂತರ ನಿಮಗೆ ಡಿಜಿ ಲಾಕರ್ ಅಕೌಂಟ್ ಕ್ರಿಯೇಟ್ ಮಾಡಲು ಕೇಳುತ್ತದೆ ಅದನ್ನು ಕಂಪ್ಲೀಟ್ ಮಾಡಿ.
•ನಂತರ ಅರ್ಜಿಯ ಫಾರಂ ಓಪನ್ ಆಗುತ್ತದೆ, ಅಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿನ್ಸಲ್ಲಿಸಿ
ರೈತರೇ ಈ ಲೇಖನವು ನಿಮಗೆ ಗಂಗಾ ಕಲ್ಯಾಣ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದೆ ಎಂದು ಭಾವಿಸುತ್ತೇನೆ. ಇದೆ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮಕ್ಕೆ ಮತ್ತೆ ಭೇಟಿ ನೀಡಿ.