Ganga Kalyana yojane : ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆರಂಭ! ಹೇಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿ ಇಲ್ಲಿದೆ!

Ganga Kalyana yojane : ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಲೇಖನಕ್ಕೆ ತಮಗೆ ಸ್ವಾಗತ. ಈ ಲೇಖನವು ನಿಮಗೆ ಸರ್ಕಾರದಿಂದ ಉಚಿತವಾಗಿ ಕೊಳವೆ ಬಾವಿ ಅಥವಾ ಬೋರ್ವೆಲ್ ಅನ್ನು ಹೇಗೆ ಸಬ್ಸಿಡಿ ಮೂಲಕ ಪಡೆಯಬಹುದು ಅನ್ನುವ ಮಾಹಿತಿಯನ್ನು ಒದಗಿಸಲಿದ್ದೇವೆ. ಯಾವುದೇ ಕೆನಾಲ್ ಅಥವಾ ನೀರಿನ ಮೂಲಗಳು ಇಲ್ಲದ ರೈತರು ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಬಹುದು. ಅದಕ್ಕಾಗಿ ಬೋರ್ವೆಲ್ ಕೊರೆಸಲು ಆಸಕ್ತಿ ಇರುವ ರೈತರು ತಪ್ಪದೆ ಈ ಲೇಖನವನ್ನು ಕೊನೆಯವರೆಗೂ ಓದಿ. ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯಿರಿ.

ಹೌದು ಸ್ನೇಹಿತರೆ, ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತರಿಗೆ ಆರ್ಥಿಕ ನೆರವನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಅನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತೇವೆ. ಅದರಂತೆ ಈ ಗಂಗಾ ಕಲ್ಯಾಣ ಯೋಜನೆಯ ಕೂಡ ರೈತರಿಗೆ ನೆರವು ನೀಡುವ ಒಂದು ಯೋಜನೆಯಾಗಿದೆ. ಈ ಗಂಗಾ ಕಲ್ಯಾಣ ಯೋಜನೆಯ ಎಲ್ಲಾ ವರ್ಗದ ರೈತರಿಗೆ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ.

ರೈತರ ಸರ್ಕಾರವು ಹಿಂದೆ ಹಲವು ವರ್ಗಗಳಿಗೆ ಗಂಗಾ ಕಲ್ಯಾಣ ಯೋಜನೆಯ ಅರ್ಜಿಯನ್ನು ಆಹ್ವಾನಿಸಿತ್ತು. ಈಗ ಮತ್ತೆ ಎಸ್ಸಿ .ಎಸ್ಟಿ (sc/st) ವರ್ಗಕ್ಕೆ ಸೇರಿದ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅರ್ಜಿ ಹಾಕಲು ಆಹ್ವಾನಿಸಲಾಗಿದೆ. ಆದ್ದರಿಂದ ಎಸ್ಸಿ ಎಸ್ಟಿ ವರ್ಗಕ್ಕೆ ಸೇರಿದ ರೈತರು ಕೊಟ್ಟಿರುವ ಕೊನೆಯ ದಿನಾಂಕದೊಳಗೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಗಂಗಾ ಕಲ್ಯಾಣ ಯೋಜನೆಗೆ ಎಸ್ಸಿ ಎಸ್ಟಿ ವರ್ಗದ ರೈತರು ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳೇನು ಮತ್ತು ಬೇಕಾಗುವಂತ ದಾಖಲೆಗಳೇನು ಹಾಗೂ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು ಅನ್ನುವುದರ ಮಾಹಿತಿಯನ್ನು ಕೆಳಗೆ ಅಂತ ಹಂತವಾಗಿ ನಾವು ನಿಮಗೆ ತಿಳಿಸಿದ್ದೇವೆ.

 

ಗೃಹ ಲಕ್ಷ್ಮಿ ಮಹಿಳೆಯರಿಗೆ ಸರ್ಕಾರದಿಂದ ಶಾಕ್! ಎರಡು ಲಕ್ಷ ಮಹಿಳೆಯರ ಲಕ್ಷ್ಮಿ ಅರ್ಜಿ ರಿಜೆಕ್ಟ್!

WhatsApp Group Join Now
Telegram Group Join Now       

 

ಇದೇ ರೀತಿ ಸರ್ಕಾರದ ರೈತರಿಗೆ ಸಂಬಂಧಿಸಿದ ಸಬ್ಸಿಡಿ ಯೋಜನೆಗಳು, ಸರ್ಕಾರದ ನೌಕರಿಗಳು ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಪ್ರಚಲಿತ ಸುದ್ದಿಗಳನ್ನು ನಮ್ಮ ಲೇಖನದ ಮೂಲಕ ನಿಮಗೆ ತಿಳಿಸಲಾಗುತ್ತದೆ. ನಿಮಗೆ ಈ ರೀತಿಯ ಮಾಹಿತಿಗಳ ಅವಶ್ಯಕತೆ ಇದ್ದರೆ ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಂಡು ಪ್ರತಿದಿನ ಮಾಹಿತಿಯನ್ನು ಪಡೆಯಬಹುದು.

Ganga Kalyana yojane

ಗಂಗಾ ಕಲ್ಯಾಣ ಯೋಜನೆ (Ganga Kalyana yojane) :

ರೈತರ ನಮ್ಮ ಸರ್ಕಾರ 5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಬಡ ರೈತರಿಗೆ ಅವರ ಬೆಳೆಗಳನ್ನು ಉತ್ತಮವಾಗಿ ಬೆಳೆಯಲು ನೀರಿನ ಮೂಲವನ್ನು ಸೃಷ್ಟಿ ಮಾಡಿ ಕೊಡಬೇಕು ಅನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಂದ ರೈತರಿಗೆ ತಮ್ಮ ಭೂಮಿಯಲ್ಲಿ ಕೊಳವೆಬಾವಿ ಅಥವಾ ಬೋರ್ವೆಲ್ ಅನ್ನು ಕೊರೆಸಲು ಸರ್ಕಾರವು 2 ಲಕ್ಷದವರೆಗೆ ಸಬ್ಸಿಡಿ ಹಣವನ್ನು ನೀಡುತ್ತದೆ.

ಈ ರೀತಿಯಾಗಿ ರೈತರು ಬೋರ್ವೆಲ್ ಗಳನ್ನ ತಮ್ಮ ಜಮೀನಿನಲ್ಲಿ ಕೊರೆಸಿಕೊಂಡರೆ ತಮಗೆ ಅವಶ್ಯಕತೆ ಇರುವ ಸಂದರ್ಭದಲ್ಲಿ ನೀರನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದ ಬೆಳೆಗಳನ್ನು ಬೆಳೆಯಲು ಈ ಯೋಜನೆ ನೆರವಾಗಿದೆ. ಅಷ್ಟೇ ಅಲ್ಲದೆ ರೈತರು ಉತ್ತಮ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಆರ್ಥಿಕವಾಗಿ ಸ್ವಧೃಢರಾಗಲು ಈ ಯೋಜನೆ ಸಹಾಯ ನೀಡುತ್ತಿದೆ.

Ganga Kalyana yojane

ಈ ಯೋಜನೆಯಿಂದ ರೈತರು ಕೊಳವೆಬಾವಿ ಕೊರೆಸಿಕೊಂಡರೆ ಅವರು ವಾಣಿಜ್ಯ ಬೆಳೆಗಳನ್ನಾದರೂ ಅಥವಾ ತೋಟಗಾರಿಕೆ ಬೆಳೆಗಳನ್ನಾದರೂ ಕೂಡ ತುಂಬಾ ಸುಲಭವಾಗಿ ನೀರಿನ ತೊಂದರೆ ಇಲ್ಲದೆ ಬೆಳೆಯಬಹುದಾಗಿದೆ. ಈಗಾಗಲೇ ಹಲವು ವರ್ಗಗಳ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕಲು ಅರ್ಜಿಗಳನ್ನು ಕರೆಯಲಾಗಿದೆ. ಅದರಂತೆ ಎಸ್ಸಿ ಎಸ್ಟಿ ನಿಗಮದಲ್ಲಿ ಕೂಡ ರೈತರಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಕರೆಯಲಾಗಿದ್ದು, ಈ ಅರ್ಜಿ ಹಾಕುವುದು ಹೇಗೆ ಮತ್ತು ಈ ಎಸ್ಸಿ ಎಸ್ಟಿ ನಿಗಮದಿಂದ ರೈತರಿಗೆ ಬೋರ್ವೆಲ್ ಕೊರೀಸಲು ಎಷ್ಟು ಸಬ್ಸಿಡಿ ಹಣ ನೀಡಲಾಗುತ್ತದೆ ಅನ್ನುವ ವಿಷಯದ ಕುರಿತು ಇಲ್ಲಿ ಮಾಹಿತಿ ತಿಳಿಯಿರಿ.

 

ಆಧಾರ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡಲು ಇವತ್ತು ಕೊನೆಯ ದಿನ! ಫೀಲಿಂಗ್ ಬಳಸಿ ಸುಲಭವಾಗಿ ಅಪ್ಡೇಟ್ ಮಾಡಿ!

 

ಗಂಗಾ ಕಲ್ಯಾಣ ಯೋಜನೆಯಿಂದ ನೀಡುವ ಸಬ್ಸಿಡಿ ಹಣ ಎಷ್ಟು :

ಸ್ನೇಹಿತರೆ ಸರ್ಕಾರವು ಗಂಗಾ ಕಲ್ಯಾಣ ಯೋಜನೆಯ ಹಣವನ್ನು ಆಯಾ ಜಿಲ್ಲೆಗಳಿಗೆ ತಕ್ಕಂತೆ ಆಗುವ ಖರ್ಚಿನ ಆಧಾರದ ಮೇಲೆ ಆಯಾ ಜಿಲ್ಲೆಗಳಿಗೆ ಬೇರೆಬೇರೆ ಸಬ್ಸಿಡಿ ಹಣವನ್ನು ನಿಗದಿಪಡಿಸಿದೆ ಆದರೆ ಮಾಹಿತಿ ಇಲ್ಲಿದೆ.

•ರಾಮನಗರ ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಬೋರ್ವೆಲ್ ಕರಸಲು ರೈತರಿಗೆ ಸುಮಾರು 4.5 ಲಕ್ಷ ವರೆಗೆ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಈ ಸಬ್ಸಿಡಿ ಹಣದಲ್ಲಿ ಸುಮಾರು ₹75,000 ಹಣವನ್ನು ವಿದ್ಯುತ್ ಪೂರೈಕೆಯ ಸಲುವಾಗಿ ಎಸ್ಕಾಂ ಗೆ ಕಳಿಸಲಾಗುತ್ತದೆ.

•ಈ ಮೇಲೆ ನೀಡಿದ ಜಿಲ್ಲೆಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಜಿಲ್ಲೆಗಳಿಗೆ ಗಂಗಾಕಲ್ಯಾಣ ಯೋಜನೆಯ ಮೂಲಕ ಸುಮಾರು 3.5 ಲಕ್ಷ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಇದರಿಂದ ಸುಮಾರು ₹75,000 ಹಣವನ್ನು ಎಸ್ಕಾಂ ಗೆ ವಿದ್ಯುತ್ ಪೂರೈಕೆಯ ಸಲುವಾಗಿ ನೀಡಲಾಗುತ್ತದೆ.

Ganga Kalyana yojane

ಗಂಗಾ ಕಲ್ಯಾಣ ಯೋಜನೆಗೆ ಬೇಕಾಗುವ ದಾಖಲೆಗಳು (Ganga Kalyana yojane) : 

ರೈತರೇ ಈ ಕೆಳಗಿನ ದಾಖಲೆಗಳನ್ನು ನೀವು ಹೊಂದಿದ್ದರೆ ಗಂಗಾ ಕಲ್ಯಾಣ ಯೋಜನೆಯ ಮೂಲಕ ನಿಮ್ಮ ಭೂಮಿಯಲ್ಲಿ ಸಬ್ಸಿಡಿ ಮೂಲಕ ಬೋರ್ವೆಲ್ ಕೊರೆಸಲು ಅರ್ಜಿ ಹಾಕಬಹುದು.

  • ಫೋನ್ ನಂಬರ್
  • ರೈತರ ಫೋಟೋ
  • ರೈತರ ಆಧಾರ್ ಕಾರ್ಡ್
  • ರೈತರ ಬ್ಯಾಂಕ್ ಖಾತೆ
  • ರೈತರ ಜಮೀನಿನ ಪತ್ರಗಳು
  • ಭೂಮಿಯ ಭೂ ಹಿಡುವಳಿ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಮಾತ್ರ
  • ನೀರಾವರಿ ಇಲ್ಲದೆ ಇರುವುದರ ಪ್ರಮಾಣ ಪತ್ರ

 

ಪ್ರಮುಖ ದಿನಾಂಕಗಳು (Ganga Kalyana yojane) :

ಈ ಹಿಂದೆ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿರುವ ಎಲ್ಲಾ ವರ್ಗಗಳ (ಲಿಂಗಾಯತ , ದೇವರಾಜ್ ಅರಸು ನಿಗಮ, ಹಿಂದುಳಿದ ವರ್ಗಗಳು) ಅರ್ಜಿ ಹಾಕುವ ಕೊನೆಯ ದಿನಾಂಕ 15 ಸೆಪ್ಟಂಬರ್ 2024.

ಇದೀಗ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿರುವ ಎಸ್ಸಿ ಎಸ್ಟಿ ವರ್ಗದ ನಿಗಮದ ಅರ್ಜಿ ಹಾಕುವ ಕೊನೆಯ ದಿನಾಂಕ 10 ಅಕ್ಟೋಬರ್ 2024.

Ganga Kalyana yojane

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕುವುದು ಹೇಗೆ…?

ಈ sc /st ನಿಗಮದಲ್ಲಿ ಅರ್ಜಿ ಆಹ್ವಾನಿಸಲಾಗಿರುವ ಗಂಗಾ ಕಲ್ಯಾಣ ಯೋಜನೆಗೆ ಆಸಕ್ತಿ ಇರುವ ರೈತರು ಮೇಲೆ ನೀಡಿರುವ ದಾಖಲೆಗಳನ್ನು ಬಳಸಿಕೊಂಡು ಸೇವಾ ಸಿಂಧು ಪೋರ್ಟಲ್ ಅಲ್ಲಿ ಆನ್ಲೈನ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

 

         ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

 

ಮೊಬೈಲ್ ನಲ್ಲಿ ನಿಮಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ ಅಂದರೆ ನಿಮ್ಮ ಹತ್ತಿರದ ಯಾವುದಾದರೂ ಗ್ರಾಮವನ್ ಅಥವಾ ಕರ್ನಾಟಕ ಒನ್ ಆನ್ಲೈನ್ ಸೆಂಟ್ರಗಳಿಗೆ ಭೇಟಿ ನೀಡಿ ಸುಲಭವಾಗಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಅಕ್ಟೋಬರ್ 10 ಕೊನೆ ದಿನಾಂಕ ಆಗಿರುವುದರಿಂದ ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು.

 

ಸ್ನೇಹಿತರೆ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕಲು ಕೊನೆಯ ದಿನಾಂಕ ಯಾವಾಗ ಮತ್ತು ಈ ಯೋಜನೆಗೆ ಹೇಗೆ ಹಾಕಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನವು ನಿಮಗೆ ಒದಗಿಸಿದೆ ಎಂದು ಭಾವಿಸುತ್ತೇನೆ.

 

Leave a Comment