Gas cylinder subsidy : ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಿಮಗೆ ಕೇವಲ ₹500 ರೂಪಾಯಿಯಲ್ಲಿ ಗ್ಯಾಸ್ ಸಿಲೆಂಡರ್ ಅನ್ನು ಹೇಗೆ ಪಡೆಯಬೇಕು ಅನ್ನುವಂತಹ ವಿಷಯದ ಬಗ್ಗೆ ಮಾಹಿತಿ ಒದಗಿಸುತ್ತದೆ. ಕೇಂದ್ರ ಸರ್ಕಾರದ ಈ ಒಂದು ಯೋಜನೆಯಲ್ಲಿ ನೋಂದಣಿ ಮಾಡಿಕೊಂಡರೆ ಪ್ರತಿ ತಿಂಗಳು ಕೇವಲ ₹500 ರೂಪಾಯಿಯಲ್ಲಿ ಗ್ಯಾಸ ಸಿಲಿಂಡರ್ ಅನ್ನು ಪಡೆಯಬಹುದು. ಅದು ಹೇಗೆ, ಅದಕ್ಕೆ ಏನೆಲ್ಲಾ ದಾಖಲೆಗಳು ಬೇಕು ಮತ್ತು ಕೇಂದ್ರ ಸರ್ಕಾರದ ಈ ಯೋಜನೆ ಯಾವುದು ಹಾಗೂ ಈ ಯೋಜನೆಗೆ ಹೇಗೆ ನೋಂದಣಿ ಮಾಡಿಕೊಳ್ಳಬೇಕು ಅನ್ನುವ ಮಾಹಿತಿ ಇಲ್ಲಿದೆ.
ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಎಂಬ ಯೋಜನೆಯ ಮೂಲಕ ರೇಷನ್ ಕಾರ್ಡ್ ಅವರಿಗೆ ಈ ಒಂದು ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಈ ಉಜ್ವಲ ಯೋಜನೆಯಲ್ಲಿ ನೀವೇನಾದರೂ ನೋಂದಣಿ ಮಾಡಿಕೊಂಡರೆ, ಸರ್ಕಾರವು ನೀಡುವ ಸಬ್ಸಿಡಿ ಹಣ ಪಡೆಯುವುದರ ಮೂಲಕ ಕೇವಲ ₹500 ರೂಪಾಯಿಯಲ್ಲಿ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದು.ಅದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಈ ಲೇಖನವನ್ನು ಕೊನೆಯ ವರೆಗೆ ಓದಿರಿ.
ಮೊದಲ ಬಾರಿ ದೇಶದಲ್ಲಿ ಈ ಉಜ್ವಲ್ ಯೋಜನೆಯನ್ನು ಆರಂಭಿಸಿದಾಗ ಕೇವಲ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ನ ಜನರಿಗೆ ನೀಡಲಾಯಿತು ಮತ್ತು ಉಚಿತವಾಗಿ ಗ್ಯಾಸ್ ಸಂಪರ್ಕವನ್ನು ಮಾಡಿ ಕೊಡಲಾಯಿತು. ಈ ಯೋಜನೆಯಿಂದ ದೇಶದಲ್ಲಿ ಲಕ್ಷಾಂತರ ಕುಟುಂಬಗಳು ಗ್ಯಾಸ್ ಸಿಲಿಂಡರನ್ನು ಪಡೆದಿವೆ. ಜೊತೆಗೆ ಈ ಯೋಜನೆಯ ಮೂಲಕ ನಿಡುವ ಸಬ್ಸಿಡಿ ಹಣವನ್ನು ಕೂಡ ಪಡೆಯುತ್ತಿವೆ.
ರೇಷನ್ ಕಾರ್ಡ್ ಅರ್ಜಿ ಹಾಕಲು ಅಥವಾ ತಿದ್ದುಪಡಿ ಮಾಡಲು ಕಾಯುತ್ತಿದ್ದೀರಾ? ಈ ದಿನಾಂಕದಂದು ಅರ್ಜಿ ಆರಂಭದ ಸಾಧ್ಯತೆ!
ಸ್ನೇಹಿತರೆ ನಮ್ಮ ಈ ಮಾಧ್ಯಮವು ಇಂತಹ ಜನರಿಗೆ ಉಪಯೋಗವಾಗುವ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳ ಬಗ್ಗೆ , ವಿಧ್ಯಾರ್ಥಿಗಳ ಪರೀಕ್ಷೆ ದಿನಾಂಕದ ಬಗ್ಗೆ, ಹೊಸ ಹುದ್ದೆಗಳ ಬಗ್ಗೆ ಮತ್ತು ರೇಷನ್ ಕಾರ್ಡ್ ಅರ್ಜಿ ದಿನಾಂಕದ ಬಗ್ಗೆ ಹಾಗೂ ಹಲವಾರು ಪಿಂಚಣಿ ಯೋಜನೆಗಾಗಿ ಅರ್ಜಿ ಹಾಕುವ ಬಗ್ಗೆ ಮಾಹಿತಿ ಹಕ್ಕು ಲೇಖನವನ್ನು ನೀಡುತ್ತಿದ್ದು, ಇಂತಹ ಮಾಹಿತಿಗಳನ್ನು whatsapp group ಸೇರಿಕೊಂಡು ಮಿಸ್ ಮಾಡದೇ ಪಡೆಯಬಹುದು.
ಗ್ಯಾಸ್ ಸಿಲಿಂಡರ್ ಸಬ್ಸಿಡಿ (Gas cylinder subsidy ) :
ಸ್ನೇಹಿತರೆ ನೀವು ಇತ್ತೀಚಿನ ದಿನಗಳಲ್ಲಿ ಗಮನಿಸಿರಬಹುದು, ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೂ ಉಪಯೋಗವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ ಅದರಲ್ಲಿ ಈ ಉಜ್ವಲ್ ಯೋಜನೆಯು ಕೂಡ ಒಂದಾಗಿದೆ. ಈ ಯೋಜನೆಗೆ ನೀವು ಇನ್ನು ನೋಂದಣಿ ಮಾಡಿಕೊಂಡಿಲ್ಲವಾ? ನೀವು ಈ ಯೋಜನೆಗೆ ಅರ್ಜಿ ಹಾಕಲು ಕಾಯುತ್ತಿದ್ದೀರ? ಹಾಗೂ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ವಿಧಾನವನ್ನು ಹುಡುಕುತ್ತಿದ್ದೀರ? ಹಾಗಾದರೆ ಈ ಲೇಖನವು ನಿಮಗೆ ಅದರವ್ವಗ್ಗೆ ಮಾಹಿತಿ ಒದಗಿಸುತ್ತದೆ.
ನಮ್ಮ ದೇಶದಲ್ಲಿ ಇನ್ನು ಬಹಳ ಮಹಿಳೆಯರು ಅಡುಗೆ ಮಾಡಲು ಕಟ್ಟಿಗೆಗಳನ್ನು ಬಳಸುತ್ತಾರೆ. ಇದರಿಂದ ಮಹಿಳೆಯರ ಆರೋಗ್ಯದಲ್ಲಿ ಏರು ಪಾರು ಉಂಟಾಗುತ್ತದೆ. ಅದ್ದರಿಂದ ಮಹಿಳೆಯರಿಗೆ ಅಡುಗೆ ಮಾಡಲು ಯ ಇದೆ ತೊಂದರೆ ಆಗಬಾರದು ಅನ್ನುವ ಉದ್ದೇಶದಿಂದ ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯನ್ನು ಜಾರಿಗೆ ತರಲಾಯಿತು ಈ ಒಂದು ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಸಾಧೃಢರಾಗಲು ಕೂಡ ನೆರವಾಗುತ್ತದೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆ (Gas cylinder subsidy ) :
ಸ್ನೇಹಿತರೆ ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯನ್ನು 2019 ರಲ್ಲಿ ನರೇಂದ್ರ ಮೋದಿ ಅವರ ಪ್ರಧಾನಿ ಅಧ್ಯಕ್ಷತೆ ಸಮಯದಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆ ಜಾರಿಗೆ ತಂದು ಇಲ್ಲಿಗೆ ಸುಮಾರು 5 ವರ್ಷಗಳಾಗಿವೆ. ಇನ್ನು ಸಹ ಈ ಯೋಜನೆಯು ಚಾಲ್ತಿಯಲ್ಲಿದೆ ಮತ್ತು ಯೋಜನೆಯಿಂದ ಈಗ ₹300 ರೂಪಾಯಿ ಸಬ್ಸಿಡಿ ಹಣವನ್ನು ಕೂಡ ಪಡೆಯಬಹುದು. ಈ ಯೋಜನೆಗೆ ಅರ್ಜಿ ಹಾಕಿ ನೋಂದಣಿ ಮಾಡಿಕೊಂಡವರಿಗೆ ಸರ್ಕಾರವು ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಉಚಿತವಾಗಿ ಮಾಡಿಕೊಡಲಾಗಿದೆ.
ಈ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಮೂಲಕ ಸಬ್ಸಿಡಿ ಹಣವನ್ನು ಪಡೆಯಲು ಏನೆಲ್ಲಾ ಅರ್ಹತೆಗಳು ಬೇಕು, ಈ ಯೋಜನೆಗೆ ಎಲ್ಲಿ ನೋಂದಣಿ ಮಾಡಿಕೊಳ್ಳಬೇಕು? ಮತ್ತು ಯೋಜನೆಗೆ ಏನೆಲ್ಲಾ ದಾಖಲೆಗಳನ್ನು ಬೇಕು ಅನ್ನುವ ಮಾಹಿತಿ ಇಲ್ಲಿದೆ. ಎಲ್ಲ ಅರ್ಹತೆಗಳು ಮತ್ತು ದಾಖಲೆಗಳು ಹೊಂದಿದವರು ಅರ್ಜಿ ಹಾಕಲು ಬೇಕಾಗುವ ಅಧಿಕೃತ ವೈಬ್ ಸೈಟ್ ಲಿಂಕ್ ಮೇಲೆ ಒತ್ತಿ (ಲಿಂಕ್ ಕೆಳಗೆ ನೀಡಲಾಗಿದೆ) ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಿ.
ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣಕ್ಕಾಗಿ ಅರ್ಹತೆಗಳು :
- ಯೋಜನೆಗೆ ಅರ್ಜಿ ಸಲ್ಲಿಸುವವರು ಭಾರತೀಯರಾಗಿರಬೇಕು ಮತ್ತು ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
- ಯೋಜನೆಯ ಅರ್ಜಿ ಸಲ್ಲಿಸುವ ಮಹಿಳೆಯು ಆಹಾರ ಇಲಾಖೆ ನೀಡುವ ರೇಷನ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು.
- ಯೋಚನೆಗೆ ಅರ್ಜಿ ಸಲ್ಲಿಸುವ ಮಹಿಳೆಯು 18 ವರ್ಷ ವಯಸ್ಸು ಮೇಲ್ಪಟ್ಟಿರಬೇಕು.
- ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಹಾಕಲು ಅವಕಾಶ ಇದೆ. ಅದ್ದರಿಂದ ಹಿಂದಿ ನಿಮ್ಮ ಕುಟುಂಬದಲ್ಲಿ ಯಾರು ಈ ಯೋಜನೆಯ ಮೂಲಕ ಗ್ಯಾಸ್ ಕಲೆಕ್ಷನ್ ಪಡೆದಿರಬಾರದು.
ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
- ಅರ್ಜಿ ನೋಂದಣಿಗಾಗಿ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
- ಅರ್ಜಿ ಸಲ್ಲಿಸುವ ಮಹಿಳೆಯ ಹೆಸರಿನ ಆಧಾರ್ ಕಾರ್ಡ್
- ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ರೇಷನ್ ಕಾರ್ಡ್
- ಅರ್ಜಿ ಸಲ್ಲಿಸುವ ಮಹಿಳೆಯ ಬ್ಯಾಂಕ್ ಖಾತೆ
- ಮಹಿಳೆಯ ಆದಾಯ ಪ್ರಮಾಣ ಪತ್ರ
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನೀವು ಕಡ್ಡಾಯವಾಗಿ ಮೇಲೆ ನೀಡಿದ ದಾಖಲೆಗಳೊಂದಿಗೆ ಅರ್ಹತೆಗಳನ್ನು ಕೂಡ ಹೊಂದಿರಬೇಕಾಗುತ್ತದೆ. ಅರ್ಜಿ ಹಾಕಲು ಬೇಕಾಗುವಂತಹ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ನಾವು ಇಲ್ಲಿ ಕೆಳಗೆ ನೀಡಿದ್ದೇವೆ ಅದನ್ನು ಬಳಸಿಕೊಂಡು ನೀವು ಅರ್ಜಿ ಹಾಕಬಹುದು.
ಸ್ನೇಹಿತರೆ ಈ ಮೇಲಿನ ಲಿಂಕನ್ನು ಬಳಸಿಕೊಂಡು ನೀವು ಆನ್ಲೈನ್ ಮೂಲಕ ಉಜ್ವಲ ಯೋಜನೆಗೆ ಅರ್ಜಿ ಹಾಕಲು ಅವಕಾಶವಿದೆ. ನಿಮಗೆ ಮೊಬೈಲಲ್ಲಿ ಅರ್ಜಿ ಹಾಕಲು ಬರುವುದಿಲ್ಲ ಅಂದರೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಕೂಡ ಯೋಜನೆಗೆ ಹಾಕಬಹುದಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಅರ್ಜಿ ಹಾಕಿ ಸಬ್ಸಿಡಿ ಹಣವನ್ನು ಪಡೆಯುವ ಮೂಲಕ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲೆಂಡರ್ ಪಡೆಯುವುದು ಹೇಗೆ ಎಂಬ ಮಾಹಿತಿ ನಿಮಗೆ ಈ ಲೇಖನ ತಿಳಿಸಿದೆ ಎಂದು ಭಾವಿಸುತ್ತೇನೆ.