How to update adhar card : ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದಲ್ಲಿ ನಿಮಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದರ ಬಗ್ಗೆ ಬಂದಿರುವ ಬಿಗ್ ಅಪ್ಡೇಟ್ ಬಗ್ಗೆ ಮಾಹಿತಿಯನ್ನು ಒದಗಿಸಿಕೊಡುತ್ತದೆ. UIDAI (Unique identification authority of india) ಸಂಸ್ಥೆಯು ಹೊರಡಿಸಿದ ಸೂಚನೆಯ ಪ್ರಕಾರ 10 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಒಂದು ಬಾರಿಯೂ ಅಪ್ಡೇಟ್ ಮಾಡಿಸಲು ಆಧಾರ್ ಕಾರ್ಡ್ ಗಳನ್ನು ಸೆಪ್ಟೆಂಬರ್ 14ನೇ ತಾರೀಕಿನ ಒಳಗೆ ಅಪ್ಡೇಟ್ ಮಾಡಿಸಬೇಕು. ನೀವೇನಾದರೂ ಈ ತಾಲೂಕಿನ ಒಳಗೆ ಅಪ್ಡೇಟ್ ಮಾಡಿಸದಿದ್ದರೆ ನಿಮಗೆ UIDAI ಸಂಸ್ಥೆಯು ದಂಡ ಹಾಕುವುದು ಪಕ್ಕ. UIDAI ಸಂಸ್ಥೆಯು ಈ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಕಾರ್ಯವನ್ನು ಏತಕ್ಕೆ ಕೈಗೆತ್ತಿ ಕೊಂಡಿದೆ ಇದರ ಉದ್ದೇಶ ಏನು ಅನ್ನುವುದರ ಮಾಹಿತಿ ಕೆಳಗೆ ನೀಡಲಾಗಿದೆ.
ಸ್ನೇಹಿತರೆ ಆಧಾರ್ ಕಾರ್ಡ್ ಅನ್ನುವುದು ನಮ್ಮ ದೇಶದಲ್ಲಿನ ಜನಗಳು ಹೊಂದಿರಬೇಕಾದರುವ ಒಂದು ಪ್ರಮುಖ ದಾಖಲೆಯಾಗಿದೆ. ಈ ದಾಖಲೆಯನ್ನು ಬಳಸಿಕೊಂಡು ನಮ್ಮ ದೇಶದಲ್ಲಿ ನಾವು ಹಲವು ಯೋಜನೆಗಳ ಲಾಭವನ್ನು ಮತ್ತು ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿದ್ದೇವೆ. ಆಧಾರ್ ಕಾರ್ಡ್ ಕೇವಲ ಒಂದು ಗುರುತಿನ ಚೀಟಿಯಾಗಿ ಬಳಕೆಯಾಗದೆ ಸರ್ಕಾರವು ನೀಡುವಾಗ ಹಲವು ಯೋಜನೆಗಳಿಗೆ ಮತ್ತು ಇನ್ನಿತರ ಬ್ಯಾಂಕಿಂಗ್ ಕೆಲಸಗಳಿಗೆ ಪ್ರಮುಖವಾಗಿ ಬಳಸಲಾಗುತ್ತಿದೆ. ಆದ ಕಾರಣ ನಾವು ಆಧಾರ್ ಕಾರ್ಡನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಬೇಕಾದರೆ UIDAI ಸಂಸ್ಥೆ ನೀಡಿದ ಸೂಚನೆಯ ಹಾಗೆ ಕಡ್ಡಾಯವಾಗಿ ಅಪ್ಡೇಟ್ (How to update adhar card ) ಮಾಡಿಸಲೇಬೇಕಾಗುತ್ತದೆ.
ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ನಾವು ಆಧಾರ್ ಕಾರ್ಡನ್ನು ನಮ್ಮ ದೇಶದಲ್ಲಿ ಪ್ರತಿಯೊಂದು ಕೆಲಸಗಳಿಗೆ ಬಳಸುತ್ತಿರುವುದರಿಂದ, ಇದನ್ನು ನಾವು ಭದ್ರವಾಗಿ ಮತ್ತು ಚಾಲ್ತಿಯಲ್ಲಿ ಇಟ್ಟುಕೊಳ್ಳಲೇಬೇಕಾಗಿದೆ. ಯುಐಡಿಎಐ ಸಂಸ್ಥೆ ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಆಧಾರ್ ಕಾರ್ಡ್ಗಳನ್ನು ಅಪ್ಡೇಟ್ (How to update adhar card ) ಮಾಡೋದಕ್ಕೂ ಎಂದು ನಿಯಮವನ್ನು ಜಾರಿ ಮಾಡಿದೆ. ಇದಕ್ಕೆ ಸೆಪ್ಟಂಬರ್ 14ನೇ ತಾರೀಕು ಕೊನೆಯ ದಿನಾಂಕವಾಗಿ ಸಂಸ್ಥೆಯು ನಿಗದಿಪಡಿಸಿದೆ.
ಸ್ನೇಹಿತರೆ ಮುಂದೆ ಪ್ರತಿದಿನ ಇದೇ ರೀತಿಯಾಗಿ ಸರ್ಕಾರವು ಜಾರಿಗೊಳಿಸುವ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ, ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಮತ್ತು ಇನ್ನಿತರ ಯಾವುದೇ ಯೋಜನೆಗೆ ಸಂಬಂಧಪಟ್ಟ ಕಡ್ಡಾಯ ಮಾಡಲೇ ಬೇಕಾಗುವ ನಿಯಮಗಳು ಮತ್ತು ಹೊಸ ರೂಲ್ಸ್ ಗಳು ಜಾರಿ ಮಾಡಿರುವುದರ ಬಗ್ಗೆ ಮಾಹಿತಿ ತಿಳಿಯಲು ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಂಡು, ಕೂಡಲೇ ವಾಟ್ಸಾಪ್ ಗ್ರೂಪಿಗೆ ಜಾಯಿನ್ ಮಾಡಿಕೊಳ್ಳಿ.
ಸೆಪ್ಟೆಂಬರ್ 14 ಕೊನೆಯ ದಿನಾಂಕ (How to update adhar card ) :
ಸ್ನೇಹಿತರೆ UIDAI ಸಂಸ್ಥೆಯು ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದರ ಬಗ್ಗೆ ಹೊರಡಿಸಿರುವ ಸೂಚನೆ ಏನೆಂದರೆ, ನೀವು ಆಧಾರ್ ಕಾರ್ಡನ್ನು ಮಾಡಿಸಿ ಹತ್ತು ವರ್ಷಗಳಿಗಿಂತ ಹೆಚ್ಚು ಆಗಿದ್ದರೆ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲೇಬೇಕು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು UIDAI ಸಂಸ್ಥೆಯು ಸೆಪ್ಟೆಂಬರ್ 14 ದಿನಾಂಕವನ್ನು ಕೊನೆಯ ದಿನಾಂಕವಾಗಿ ನಿಗದಿಪಡಿಸಿದೆ.
ಸ್ನೇಹಿತರೆ ನಾಳೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕೊನೆಯ ದಿನಾಂಕವಾಗಿದ್ದು, ಯಾರ ಆಧಾರ್ ಕಾರ್ಡ್ ಗಳು ಮಾಡಿಸಿ 10 ವರ್ಷಕ್ಕಿಂತ ಹೆಚ್ಚು ಆಗಿದೆಯೋ ಅವರು ತಪ್ಪದೇ ಅಪ್ಡೇಟ್ ಮಾಡಿಸಿಕೊಳ್ಳಿ. ಇಲ್ಲವಾದರೆ ನಂತರ ನಿಮಗೆ UIDAI ಸಂಸ್ಥೆಯು ದಂಡವನ್ನು ಓದಿಸುವುದು ಪಕ್ಕ.
ಅಪ್ಡೇಟ್ ಮಾಡದಿದ್ದರೆ ಎಸ್ಟು ದಂಡ (How to update adhar card ) :
ಹೌದು ಸ್ನೇಹಿತರೆ, UIDAI ಸಂಸ್ಥೆಯು ಆಧಾರ್ ಅಪ್ಡೇಟ್ ಮಾಡಿಸಲು ಸೂಚನೆ ನೀಡಿ ಸುಮಾರು ತಿಂಗಳುಗಳು ಆದರೆ ಬಹಳಷ್ಟು ಜನ ಇನ್ನು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ (How to update adhar card ). ನೀವೇನಾದರೂ ಸಪ್ಟಂಬರ್ 14ರ ಒಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸದಿದ್ದರೆ, ನಿಮಗೆ ಮುಂದೆ ಪ್ರತಿಯೊಂದು ಅಪ್ಡೇಟ್ಗೂ ಕೂಡ ರೂ.50 ದಂಡವನ್ನು ವಿಧಿಸಲಾಗುತ್ತದೆ. ಅಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನೀವೇನಾದರೂ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಮತ್ತಿತರ ಯಾವುದೇ ಅಪ್ಡೇಟ್ಗಳನ್ನು ಮಾಡಿಸಬೇಕಾದರೂ, ನಿಮಗೆ ಪ್ರತಿಯೊಂದುಕ್ಕೂ 50 ರೂಪಾಯಿ ದಂಡ ವಿಧಿಸಲಾಗುತ್ತದೆ.
ನೀವೇನಾದರೂ ಸೆಪ್ಟಂಬರ್ 14ರ ಮೇಲ್ಪಟ್ಟು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಹೋದರೆ ಈ ಮೇಲೆ ಹೇಳಿದಾಗೆ ಪ್ರತಿಯೊಂದು ರೂ.50 ದಂಡವನ್ನು ವಿಧಿಸಲಾಗುತ್ತದೆ. UIDAI ಸಂಸ್ಥೆಯು ಆಧಾರ್ ಕಾರ್ಡ್ ಅಪ್ಡೇಟ್ ನಿಂದ ಪ್ರಸ್ತುತ ಡೇಟಾವನ್ನು ಕಲೆಹಾಕಿಕ್ಕೊಂಡು ಜನರಿಗೆ ಭದ್ರತೆಯನ್ನು ನೀಡುವ ಸಲುವಾಗಿ ಈ ಕೆಲಸವನ್ನು ಕೈಗೆತ್ತಿಕೊಂಡಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದರ ಉಪಯೋಗ :
ಸ್ನೇಹಿತರೆ UIDAI (Unique identification authority of India) ಸಂಸ್ಥೆಯು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದರಿಂದ ನಮ್ಮ ಸುರಕ್ಷತೆಗೆ ಭದ್ರತೆಯನ್ನು ನೀಡುವ ಉದ್ದೇಶದಿಂದ ಈ ಕೆಲಸ ಮಾಡುತ್ತಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದರಿಂದ, ನಮ್ಮ ದಾಖಲೆಗಳನ್ನು ಹಿಂದಿನ ದಾಖಲೆಗಳೊಂದಿಗೆ ಹೋಲಿಸಿ ಮತ್ತೆ ಪರಿಶೀಲನೆ ಮಾಡಲಾಗುತ್ತದೆ.ಇದರಿಂದ ನಮ್ಮ ಗುರುತು ಮತ್ತು ವಿಳಾಸಗಳನ್ನು ನಿಖರವಾಗಿ ಲಿಂಕ್ ಮಾಡಿ ಖಚಿತಪಡಿಸಲಾಗುತ್ತದೆ. ಒಟ್ಟಿನಲ್ಲಿ ಆಧಾರ್ ಅಪ್ಡೇಟ್ ನ ಉದ್ದೇಶವು ನಮಗೆ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುವುದಾಗಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ (How to update adhar card ) :
ಸ್ನೇಹಿತರ ನೀವು ಆಧಾರ್ ಕಾರ್ಡನ್ನು ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಸುಲಭವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡನ್ನು ಹೇಗೆ ಅಪ್ಡೇಟ್ ಮಾಡಬೇಕು ಅನ್ನುವ ಹಂತಗಳನ್ನು ಕೆಳಗೆ ನೀಡಲಾಗಿದೆ ಅವುಗಳನ್ನು ಅನುಸರಿಸಿ.
ಆಧಾರ್ ಕಾರ್ಡ್ ಅಪ್ಡೇಟ್ ಗೆ ಇಲ್ಲಿ ಒತ್ತಿ
•ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಮೇಲೆ ನೀಡಿದ UIDAI ನ ಅಧಿಕೃತ ಲಿಂಕ್ ಮೇಲೆ ಒತ್ತಿ, ಅಲ್ಲಿ ಆಧಾರ್ ಅಪ್ಡೇಟ್ ಆಯ್ಕೆಯ ಮೇಲೆ ಒತ್ತಿ.
•ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಹಾಕಿ ಲಾಗಿನ್ ಆಗಿ.
•ಲಾಗಿನ್ ಆದ ನಂತರ ನಿಮ್ಮ ಪ್ರೊಫೈಲ್ ಮೇಲೆ ಒತ್ತಿ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸ ಪ್ರತಿ ಒಂದನ್ನು ಚೆಕ್ ಮಾಡಿಕೊಳ್ಳಿ.
•ನಂತರ ನಿಮ್ಮ ಹೆಸರು ಮತ್ತು ವಿಳಾಸ ಸರಿಯಾಗಿರುವ ಯಾವುದಾದರೂ ಒಂದು ದಾಖಲೆಯನ್ನು ಅಪ್ಲೋಡ್ ಮಾಡಿ.
•ಡಾಕುಮೆಂಟ್ ಅಪ್ಲೋಡ್ ಆದ ನಂತರ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಅನ್ನಪೂರ್ಣಗೊಳಿಸಿರಿ.
ಸ್ನೇಹಿತರೆ ಸೆಪ್ಟಂಬರ್ 14 ರ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ಇಲ್ಲವಾದರೆ ಮುಂದೆ ನೀವು ದಂಡವನ್ನು ಕಟ್ಟಬೇಕಾಗುತ್ತದೆ. ನೀವು ನಿಮ್ಮ ಮುಂದಿನ ಹಲವು ಉಪಯೋಗಗಳಿಗೆ ಅಂದರೆ ಸರ್ಕಾರದ ಯೋಜನೆಗಳಿಗೆ ಬ್ಯಾಂಕಿನ ಸೇವೆಗಳಿಗೆ ಮತ್ತು ಮುಂತಾದ ಉಪಯೋಗಕ್ಕೆ ಆಧಾರ್ ಕಾರ್ಡನ್ನು ಬಳಸಬೇಕು ಮತ್ತು ನಿಮ್ಮ ಆಧಾರ್ ಕಾರ್ಡ್ ಚಾಲ್ತಿಯಲ್ಲಿ ಇರಬೇಕು ಅಂದರೆ ನೀವು ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲೇಬೇಕು. ಆದ್ದರಿಂದ ತಪ್ಪದೇ ಅಪ್ಡೇಟ್ ಮಾಡಿಸಿ.