LPG gas cylinder : ನಮಸ್ಕಾರ ಗೆಳೆಯರೇ, ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ತಮ್ಮೆಲ್ಲರಿಗೂ ಸ್ವಾಗತ. ಈ ಲೇಖನವನ್ನು ಅತಿ ಕಡಿಮೆ ಬೆಲೆಯಲ್ಲಿ ಹೇಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಬಹುದು ಅನ್ನುವುದರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಆದಕಾರಣ ನಿಮಗೆ ಗ್ಯಾಸ್ ಸಿಲಿಂಡರ್ನ ಬಳಕೆ ಅವಶ್ಯಕತೆ ಆಗಿದ್ದರೆ ಈ ಲೇಖನವನ್ನು ಪೂರ್ತಿ ಹೋಗಿ ಸಬ್ಸಿಡಿ ಮೂಲಕ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಿ.
ಹೌದು ಗೆಳೆಯರೆ, ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ದಿನನಿತ್ಯದ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಅನ್ನೆ ಬಳಕೆ ಮಾಡಲಾಗುತ್ತಿದೆ. ಆದಕಾರಣ ಗ್ಯಾಸ್ ಸಿಲಿಂಡರ್ ನ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಹಲವು ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಆಗುತ್ತಿಲ್ಲ. ಇದನ್ನು ಗಮನಿಸಿದ ಸರ್ಕಾರ ಇಂತಹ ಬಡ ಕುಟುಂಬಗಳ ಕೂಡ ಗ್ಯಾಸ್ ಸಿಲಿಂಡರ್ ನನ್ನು ಬಳಕೆ ಮಾಡಲಿ ಅನ್ನು ಉದ್ದೇಶದಿಂದ ಅವರಿಗೆ ಹಣದ ಸಹಾಯ ಮಾಡಲು ಈ ಒಂದು ಯೋಚನೆಯನ್ನು ಜಾರಿಗೆ ತಂದಿದೆ. ಅದು ಯಾವ ಯೋಜನೆ ಇದರಿಂದ ಏನು ಲಾಭ ಅನ್ನುವುದರ ಮಾಹಿತಿ ಪಡೆಯಲು ಲೇಖನವನ್ನು ಪೂರ್ತಿ ಓದಿರಿ.
ರಾಜ್ಯದಲ್ಲಿ ಪ್ರಸ್ತುತ ಮನೆಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆ 800 ತನಕ ಇದೆ. ಆದರೆ ನೀವು ಸರ್ಕಾರ ಜಾರಿ ಮಾಡಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಮೂಲಕ ಕೇವಲ 500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಈ ಉಜ್ವಲ್ ಯೋಜನೆಗೆ ನೊಂದಣಿ ಮಾಡಿಕೊಳ್ಳುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.
ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್ ಜಾರಿ!
LPG gas cylinder ಉಜ್ವಲ್ ಯೋಜನೆ :
ಸ್ನೇಹಿತರೆ ಈ ಪ್ರಧಾನಮಂತ್ರಿ ಉಜ್ವಲ್ ಯೋಜನೆಯನ್ನು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ತರಲಾಗಿತ್ತು. ಈ ಯೋಜನೆಯ ಮೂಲಕ ದೇಶದ ಬಡ ಕುಟುಂಬಕ್ಕೆ ಅತಿ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡುವ ಉದ್ದೇಶದಿಂದ ಜಾರಿಗೆ ತರಲಾಯಿತು. ಈಗ ನರೇಂದ್ರ ಮೋದಿಯವರು ಮತ್ತೆ ದೇಶದ ಅಧಿಕಾರ ಸ್ವೀಕರಿಸಿದ ನಂತರ ಈ ಯೋಜನೆಗೆ ಇನ್ನಷ್ಟು ಅಭಿವೃದ್ಧಿ ಮಾಡುವ ಉದ್ದೇಶವನ್ನು ಹೊಂದಿದ್ದಾರೆ.
ಉಜ್ವಲ್ ಯೋಜನೆ ದೇಶವ ಜನರಿಗೆ ಸಬ್ಸಿಡಿ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ನೀಡುವ ಒಂದು ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನೀವು ಪ್ರತಿ ಬಾರಿ ಗ್ಯಾಸ್ ಸಿಲೆಂಡರ್ ಅನ್ನು ಮರುಬಳಕೆ (ತುಂಬಿಸಿದಗ) ಮಾಡಿದಾಗ ₹300 ರೂಪಾಯಿಯ ಸಬ್ಸಿಡಿ ಹಣವನ್ನು ನಿಮಗೆ ಸರ್ಕಾರವು ನೀಡುತ್ತದೆ. ಈ ಯೋಜನೆಗೆ ನೊಂದಣಿ ಮಾಡಿಕೊಳ್ಳುವುದು ನೀವು ಕೆಲವೊಂದು ಅರ್ಹತೆಗಳು ಮತ್ತು ದಾಖಲಾತಿಗಳನ್ನು ಹೊಂದಿರಬೇಕು ಅವುಗಳ ಮಾಹಿತಿ ಇಲ್ಲಿದೆ.
ಪ್ರಧಾನಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿಗೆ ಅರ್ಹತೆಗಳು :
ಸ್ನೇಹಿತರೆ ಈ ಒಂದು ಯೋಜನೆಯನ್ನು ದೇಶದಲ್ಲಿನ ಬಡ ಕುಟುಂಬಗಳಿಗಾಗಿ ಜಾರಿಗೆ ತರಲಾಗಿದ್ದು ,ಈ ಯೋಜನೆ ಲಾಭ ಪಡೆಯಲು ನೋಂದಣಿದಾರರು ಕೆಲವೊಂದು ಅರ್ಹತೆಗಳನ್ನು ಕಡ್ಡಾಯವಾಗಿ ಒಂದರಬೇಕು ಅವುಗಳನ್ನು ಇಲ್ಲಿ ನೀಡಲಾಗಿದೆ.
- ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಹಾಕಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.
- ಅರ್ಜಿ ಹಾಕಲು ಬಯಸುವವರ ಕುಟುಂಬದಲ್ಲಿ ಈ ಹಿಂದೆ ಯಾರೂ ಈ ಒಂದು ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್ ಪಡೆದಿರಬಾರದು.
- ರಾಜ್ಯದ ಆಹಾರ ಇಲಾಖೆ ನೀಡುವ ರೇಷನ್ ಕಾರ್ಡ್ ಅನ್ನು ಹೊಂದಿದ ಕುಟುಂಬದ ಮಹಿಳೆ ಅರ್ಜಿ ಹಾಕಲು ಅವಕಾಶ.
- ಅರ್ಜಿ ಹಾಕಲು ಬಯಸುವ ಮಹಿಳೆಯ ವಯಸ್ಸು 18 ರಿಂದ 59 ವರ್ಷದ ಒಳಗೆ ಇರಬೇಕು.
- ಅರ್ಜಿ ಹಾಕುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ ಅತಿ ಕಡಿಮೆ ಇರಬೇಕು.
LPG gas cylinder ಉಜ್ವಲ್ ಯೋಜನೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :
ಆಧಾರ್ ಕಾರ್ಡ್ : ಅರ್ಜಿ ಹಾಕುವ ಮಹಿಳೆಯ ಆಧಾರ್ ಕಾರ್ಡ್ ನೀಡಬೇಕಾಗುತ್ತೆ. ಆಧಾರ್ ಕಾರ್ಡಿಗೆ ಫೋನ್ ನಂಬರ್ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು.
ರೇಷನ್ ಕಾರ್ಡ : ಅರ್ಜಿ ಹಾಕುವ ಮಹಿಳೆಯ ಕುಟುಂಬದ ರೇಷನ್ ಕಾರ್ಡ್ ಬೇಕಾಗುತ್ತೆ.
ಬ್ಯಾಂಕ್ ಪಾಸ್ ಬುಕ್ : ಅರ್ಜಿ ಹಾಕುವ ಮಹಿಳೆಯ ಬ್ಯಾಂಕ್ ಖಾತೆ ನೀಡಬೇಕು. ಮುಂದೆ ಇದೆ ಬ್ಯಾಂಕ್ ಖಾತೆಗೆ ಸಬ್ಸಿಡಿ ವರ್ಗಾವಣೆ ಮಾಡಲಾಗುತ್ತೆ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ : ಅರ್ಜಿ ಹಾಕುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ ತಿಳಿಯುವ ಸಲುವಾಗಿ, ಅವರು ತಮ್ಮ ಕುಟುಂಬದ ಆದಾಯ ಪ್ರಮಾಣ ಪತ್ರ ಅರ್ಜಿ ಹಾಕಲು ನೀಡಬೇಕಾಗುತ್ತದೆ.
ಮೋಬೈಲ್ ನಂಬರ್ : ಅರ್ಜಿಯ ಸ್ಥಿತಿಯ ಬಗ್ಗೆ ವಿವರಗಳನ್ನು ತಿಳಿಸಲು ಅರ್ಜಿ ಹಾಕುವಾಗ ನಿಮ್ಮ ಮೊಬೈಲ್ ನಂಬರ್ ಅನ್ನು ನೀಡಬೇಕಾಗುತ್ತದೆ.
LPG gas cylinder ಉಜ್ವಲ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು…?
ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕನ್ನು ಕ್ಲಿಕ್ ಮಾಡಿ.
ನಂತರ ಕೆಳಗೆ ಚಿತ್ರದಲ್ಲಿ ತೋರಿಸಿದ ಹಾಗೆ click here ಅನ್ನುವ ಬಟನ್ ಮೇಲೆ ಒತ್ತಿ.
ಇದಾದ ಮೇಲೆ ಚಿತ್ರದಲ್ಲಿ ತೋರಿಸಿದ ಹಾಗೆ ನಿಮಗೆ ಮೂರು ಏಜೆನ್ಸಿ ಗಳು ಕಾಣುತ್ತವೆ, ಅಲ್ಲಿ ನಿಮಗೆ ಬೇಕಾದ ಏಜೆನ್ಸಿ ಮೇಲೆ ಒತ್ತಿರಿ.
ನಂತರ ಅರ್ಜಿಯ ಫಾರಂ ಓಪನ್ ಆಗುತ್ತದೆ, ಅಲ್ಲಿ ಕೇಳಲಾಗುವ ನಿಮ್ಮ ಎಲ್ಲಾ ದಾಖಲೆಗಳ ವಿವರವನ್ನು ಸರಿಯಾಗಿ ಭರ್ತಿ ಮಾಡಿರಿ ಅರ್ಜಿಯನ್ನು ಪೂರ್ಣಗೊಳಿಸಿರಿ.
ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿರುವವರಿಗೆ ಸಿಹಿ ಸುದ್ದಿ! ಅರ್ಜಿ ಪ್ರಾರಂಭದ ದಿನಾಂಕ ಫಿಕ್ಸ್!
ಕೇವಲ 500 ರೂಪಾಯಿ ಗ್ಯಾಸ್ ಸಿಲಿಂಡರ್ ಹೇಗೆ ಪಡೆಯುವುದು…?
ಸ್ನೇಹಿತರೆ ಪ್ರಸ್ತುತ ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ನ ಬೆಳೆ ಸುಮಾರು ₹800 ರೂಪಾಯಿ ಇದೆ. ನೀವು ಈ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿ ನೊಂದಣಿ ಮಾಡಿಕೊಂಡಿದ್ದರೆ, ಈ ಯೋಜನೆಯ ಮೂಲಕ ಪ್ರತಿಬಾರಿ ಗ್ಯಾಸ್ ಮರುಬಳಕೆ ಮಾಡಿದಾಗ (ತುಂಬಿಸಿದಗ) ₹300 ಸಬ್ಸಿಡಿ ಹಣವನ್ನು ಸರ್ಕಾರ ನಿಮ್ಮ ಖಾತೆಗೆ ನೀಡುತ್ತದೆ. ಇದರಿಂದ ಕೇವಲ ₹500 ರೂಪಾಯಿಯಲ್ಲಿ ನೀವು ಗ್ಯಾಸ್ ಸಿಲೆಂಡರ್ ತೆಗೆದುಕೊಂಡಂತೆ ಆಗುತ್ತದೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಉದ್ದೇಶ :
ದೇಶದಲ್ಲಿನ ಬಡ ಕುಟುಂಬದ ಮಹಿಳೆಯರ ಆರೋಗ್ಯ, ಅವರು ಅಡುಗೆ ಮಾಡಲು ಮಳೆಗಾಲದಲ್ಲಿ ಪಡುವ ಕಷ್ಟಗಳು, ಅವರಿಗೆ ಆಗುವ ತೊಂದರೆಗಳು ಮುಂತಾದವುಗಳಿಂದ ಮಹಿಳೆಯರಿಗೆ ತೊಂದರೆ ಆಗದಂತೆ ಅವರಿಗೆ ಸಹಕಾರ ನೀಡುವ ಉದ್ದೇಶದಿಂದ ಈ ಸಬ್ಸಿಡಿ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಗ್ಯಾಸ್ ಸಿಲೆಂಡರ್ ಮೇಲೆ ನೀಡುವ ಸಬ್ಸಿಡಿ ಹಣವನ್ನು ಹೇಗೆ ಪಡೆಯಬೇಕು ಅನ್ನುವ ಮಾಹಿತಿ ನಿಮಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೀಡಿದ್ದೇನೆ ಎಂದು ಭಾವಿಸುತ್ತೇನೆ. ಮತ್ತೆ ಪ್ರತಿದಿನ ಇದೇ ರೀತಿಯ ಸರ್ಕಾರದ ಹಲವು ಯೋಜನೆಗಳ, ಹೊಸ ಸ್ಕೀಮ್ ಗಳ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ತಪ್ಪದೇ ಸೆರಿಕೊಳ್ಳಿರಿ.
ವಾಟ್ಸಾಪ್ ಗ್ರೂಪ್ ಲಿಂಕ್ – https://chat.whatsapp.com/BbT0G7MnufFADwEpUXnas3