New ration card : ನಮಸ್ಕಾರ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ ಎಲ್ಲರಿಗೂ. ನಮ್ಮ ದೇಶದಲ್ಲಿ ರೇಷನ್ ಕಾರ್ಡ್ ಅನ್ನುವುದು ಒಂದು ಪ್ರಮುಖ ಡಾಕ್ಯುಮೆಂಟ್ ಆಗಿದೆ. ನಮ್ಮ ದೇಶದಲ್ಲಿ ರೇಷನ್ ಕಾರ್ಡ್ ಇಲ್ಲದೆ ಇದ್ದರೆ ಸರ್ಕಾರದ ಹಲವು ಯೋಜನೆಗಳಿಂದ ವಂಚಿತರಾಗಬೇಕು ಆಗುತ್ತದೆ. ರೇಷನ್ ಕಾರ್ಡ್ ಅನ್ನು ಬಳಸಿಕೊಂಡು ಹಲವಾರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ. ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ, ನಮ್ಮ ರಾಜ್ಯದಲ್ಲಿ ರೇಷನ್ ಕಾರ್ಡ್ ಬೆಲೆ ತುಂಬಾ ಹೆಚ್ಚಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಜನರು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದಾರೆ. ಇಂಥವರಿಗೆ ಯಾವಾಗ ಹೊಸ ರೇಷನ್ ಕಾರ್ಡಿಗೆ ಅರ್ಜಿ ಆರಂಭವಾಗುತ್ತವೆ ಅನ್ನುವುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ.
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ಬಂದು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಅನ್ನ ಭಾಗ್ಯ ಯೋಜನೆ ಗ್ರಹ ಜ್ಯೋತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಈ ಯೋಜನೆಗಳನ ಲಾಭ ಪಡೆದುಕೊಳ್ಳಲು ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಬೇಕಾದಗಿದೆ. ಆದಕಾರಣ ರಾಜ್ಯದಲ್ಲಿ ಜನ ರೇಷನ್ ಕಾರ್ಡ್ ಮಾಡಿಸಲು ಮುಗಿ ಬಿದ್ದಿದ್ದಾರೆ. ಈ ಹಿಂದೆ ಹಲವು ಬಾರಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದ್ದು, ಹಲವು ಜನ ಅರ್ಜಿ ಹಾಕಿದ್ದಾರೆ. ಇಷ್ಟಾದರೂ ಇನ್ನೂ ಬಹಳ ಜನ ಹೊಸ ಅರ್ಜಿ ಆರಂಭವಾಗುವ ಸಲುವಾಗಿ ಕಾಯುತ್ತಿದ್ದಾರೆ. ಇಂಥವರಿಗೆ ಅರ್ಜಿ ಹಾಕಲು ಯಾವ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಬೇಕು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತಿದ್ದೇನೆ.
(New ration card) ಹೊಸ ರೇಷನ್ ಕಾರ್ಡ್ :
ಸ್ನೇಹಿತರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಆರಂಭವಾಗುತ್ತವೆ ಎಂದು ಕಾಯುತ್ತಿದ್ದಾರೆ ಮತ್ತು ಈ ಹಿಂದೆ ಅರ್ಜಿ ಹಾಕಿದವರು ರೇಷನ್ ಕಾರ್ಡ್ ವಿತರಣೆ ಸಲುವಾಗಿ ಕಾಯುತ್ತಿದ್ದಾರೆ. ಇದರ ಬಗ್ಗೆ ಸರ್ಕಾರದಿಂದ ಕೆಲವು ಮಾಹಿತಿಗಳು ದೊರಕಿವೆ ಅದರ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ರೇಷನ್ ಕಾರ್ಡ್ ವಿತರಣೆ ಯಾವಾಗ : ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಈ ಹಿಂದೆ ಹಲವು ಬಾರಿ ಅವಕಾಶ ನೀಡಲಾಗಿದ್ದು, ಬಹಳ ಜನ ಅರ್ಜಿಗಳು ಸಲ್ಲಿಸಿದ್ದಾರೆ. ಈ ಅರ್ಜಿ ಸಲ್ಲಿಸಿದ ರೇಷನ್ ಕಾರ್ಡ್ ಗಳನ್ನು ಪರಿಶೀಲಿಸಿ, ಸರಿಯಾದ ಅರ್ಹ ಕುಟುಂಬಗಳಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಮಾಹಿತಿಯ ಪ್ರಕಾರ 2,90,000 ಹೊಸ ರೇಷನ್ ಕಾರ್ಡಿಗೆ ಅರ್ಜಿಗಳು ಜನರು ಸಲ್ಲಿಸಿದ್ದು ಈ ಎಲ್ಲಾ ಅರ್ಜಿಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ ಮತ್ತು ಇದೆ ತಿಂಗಳು 15 ನೆಯ ತಾರೀಖಿನ ಒಳಗೆ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರು ತಿಳಿಸಿದ್ದಾರೆ.
HDFC ಬ್ಯಾಂಕ್ ಅಲ್ಲಿ ಕೇವಲ 10 ನಿಮಿಷದಲ್ಲಿ 10 ಲಕ್ಷದ ತನಕ ವಯಕ್ತಿಕ ಸಾಲ ಪಡೆಯಿರಿ!
(New ration card) ರೇಷನ್ ಕಾರ್ಡ್ ಅರ್ಜಿ ಯಾವಾಗ ಆರಂಭ :
ಸ್ನೇಹಿತರೆ ಆಹಾರ ಇಲಾಖೆಯು ಈ ಹಿಂದೆ ಹಲವು ಬಾರಿ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ ನೀಡಿದ್ದು, ಕೆಲವು ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇನ್ನೂ ಉಳಿದ ಜನರಿಗೆ ಇದೆ ತಿಂಗಳು ಸೆಪ್ಟಂಬರ್ 15 ಒಳಗೆ ಹಿಂದಿನ ಅರ್ಜಿ ಪರಿಶೀಲಿಸಿ, ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದಾದ ನಂತರ ಸೆಪ್ಟಂಬರ್ 15ರ ಮೇಲ್ಪಟ್ಟು ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ನೀಡುವುದಾಗಿ ಮಾಹಿತಿ ತಿಳಿದು ಬಂದಿದೆ. ಈ ಅರ್ಜಿ ಆರಂಭ ಆಗುವುದರೊಳಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬಯಸುವವರು ಈ ಕೆಳಗೆ ನೀಡಿದ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ.
New ration card ಬೇಕಾಗುವ ದಾಖಲೆಗಳು :
ಸ್ನೇಹಿತರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಪ್ರಾರಂಭವಾದ ತಕ್ಷಣ ಅರ್ಜಿ ಹಾಕಲು ಈ ಕೆಳಗಿನ ಹೇಳಿದ ಪ್ರತಿಯೊಂದು ನಿಮ್ಮ ಕುಟುಂಬದ ದಾಖಲೆಗಳನ್ನು ಪ್ರಸ್ತುತ ದಿನಾಂಕಕ್ಕೆ ತಕ್ಕ ಹಾಗೆ ರೆಡಿ ಮಾಡಿ ಇಟ್ಟುಕೊಳ್ಳಿ.
•ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ : ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನಿಮಗೆ ನೀವು ಅರ್ಜಿ ಹಾಕುವ ಸಂದರ್ಭದಲ್ಲಿ ನೀಡುವ ಮೊಬೈಲ್ ನಂಬರ್ ಮೂಲಕ ತಿಳಿಸಲಾಗುತ್ತದೆ.
•ಕುಟುಂಬದ ಸದಸ್ಯರ ಆಧಾರ್ ಕಾರ್ಡ್ : ರೇಷನ್ ಕಾರ್ಡ್ ಗೆ ಅರ್ಜಿ ಹಾಕುವ ಸಂದರ್ಭದಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನಂಬರ್ ಬೇಕಾಗುತ್ತದೆ.
•ಜಾತಿ ಮತ್ತು ಆದಾಯ ಪ್ರಮಾಣ ಪತ್ರ : ರೇಷನ್ ಕಾರ್ಡನ್ನು ಜಾತಿ ಮತ್ತು ನಿಮ್ಮ ಕುಟುಂಬದ ವಾರ್ಷಿಕ ಆದಾಯ ಪರಿಗಣಿಸಿ ನೀಡಲಾಗುತ್ತಿದ್ದು, ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವ ಸಂದರ್ಭದಲ್ಲಿ ಈ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ.
•ಜನನ ಪ್ರಮಾಣ ಪತ್ರ : ನಿಮ್ಮ ಕುಟುಂಬದಲ್ಲಿ 5 ವರ್ಷಕ್ಕಿಂತ ಚಿಕ್ಕ ಮಕ್ಕಳು ಇದ್ದರೆ, ಅವರನ್ನು ರೇಷನ್ ಕಾರ್ಡ್ ಅಲ್ಲಿ ಸೇರಿಸಲು ಅರ್ಜಿ ಹಾಕುವ ಸಮಯದಲ್ಲಿ ಆ ಮಗುವಿನ ಜನನ ಪ್ರಮಾಣ ಪತ್ರ ನೀಡಬೇಕಾಗುತ್ತದೆ.
New ration card ರೇಷನ್ ಕಾರ್ಡ್ ಅರ್ಜಿ ಹಾಕುವುದು ಹೇಗೆ ..?
ಸ್ನೇಹಿತರೆ ನೀವು ಮೇಲೆ ನೀಡಿದ ಎಲ್ಲಾ ದಾಖಲೆಗಳನ್ನು ಹೊಂದಿದ್ದು, ನಿಮ್ಮ ಕುಟುಂಬವು ಸುರೇಶನ ಕಾಲನ್ನು ಪಡೆಯಲು ಅರ್ಹ ಆಗಿದ್ದರೆ ಈ ಕೆಳಗೆ ನೀಡಿದ ವಿಧಾನವನ್ನು ಅನುಸರಿಸಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ.
•ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಆಹಾರಾಇಲಾಖೆಯ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಆಹಾರ ಇಲಾಖೆಯ ಲಿಂಕ್ ಮೇಲೆ ನೀಡಲಾಗಿದೆ.
- ಅಧಿಕೃತ ವೆಬ್ ಸೈಟ್ ಭೇಟಿ ನೀಡಿದ ನಂತರ ಅಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವ ಲಿಂಕ್ ಆಯ್ಕೆ ಮಾಡಿಕೊಳ್ಳಿ .
- ನಂತರ ಅಲ್ಲಿ ಕೇಳಲಾಗುವ ಎಲ್ಲಾ ನಿಮ್ಮ ದಾಖಲೆಗಳ ವಿವರವನ್ನು ಭರ್ತಿ ಮಾಡಿ.
- ಇದಾದ ನಂತರ ಅಲ್ಲಿ ಕೇಳಿರುವ ಕೆಲವು ದಾಖಲೆಗಳ ಫೋಟೋ ಅಪ್ಲೋಡ್ ಮಾಡಿ ಅರ್ಜಿಯನ್ನು ಪೂರ್ತಿ ಗೋಳಿಸಿರಿ.
ಸ್ನೇಹಿತರೆ ನಿಮಗೆ ಮೊಬೈಲಲ್ಲಿ ಅರ್ಜಿ ಹಾಕಲು ಬರುತ್ತಿಲ್ಲ ಅಂದರೆ ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭವಾದಾಗ ಮೇಲೆ ನೀಡಿದ ಎಲ್ಲಾ ದಾಖಲೆಗಳನ್ನು ಸರಿಯಾಗಿ ತೆಗೆದುಕೊಂಡು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಸ್ನೇಹಿತರೆ ಈ ನಮ್ಮ ವೆಬ್ಸೈಟ್ ಅಲ್ಲಿ ಪ್ರತಿದಿನ ಇದೇ ರೀತಿಯ ಲೇಖನಗಳ ಮುಖಾಂತರ ನಿಮಗೆ ಹಲವಾರು ಅರ್ಜಿ ಹಾಕುವ ಮತ್ತು ಹಲವು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಈ ಎಲ್ಲಾ ವಿಷಯಗಳ ಮಾಹಿತಿ ಬೇಕಾದಲ್ಲಿ ನಮ್ಮ ವೆಬ್ ಸೈಟ್ ಫಾಲೋ ಮಾಡಿ ಮತ್ತು ನಮ್ಮ ನಮ್ಮ WhatsApp group ಜಾಯಿನ್ ಮಾಡಿಕೊಳ್ಳಿ.
Whatsapp group link – https://chat.whatsapp.com/BbT0G7MnufFADwEpUXnas3