RRC Recruitment 2024 : ರೈಲ್ವೆ ಇಲಾಖೆಯಲ್ಲಿ 3115 ಖಾಲಿ ಹುದ್ದೆಗಳು! 10 ನೆಯ ತರಗತಿ ಪಾಸಾದವರು ಅರ್ಜಿ ಹಾಕಿ!

RRC Recruitment 2024 : ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಾವು ನಿಮಗೆ ಆರ್ ಆರ್ ಸಿ ಪೂರ್ವ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 3115 ಹುದ್ದೆಗಳಿಗೆ ಅನುಸೂಚನೆಯನ್ನು ಹೊರಡಿಸಲಾಗಿದೆ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ನೀವೇನಾದ್ರೂ ಯಾವುದಾದರೂ ಸರ್ಕಾರಿ ಹುದ್ದೆಗಳಿಗೆ ಹುಡುಕುತ್ತಿದ್ದರೆ, ಈ ಹುದ್ದೆಗಳಿಗೆ ನೀವು ಅರ್ಜಿ ಹಾಕಬಹುದು. ಇದು ಒಂದು ಉತ್ತಮ ಹುದ್ದೆಯಾಗಿದ್ದು, 10ನೇ ತರಗತಿ ಪಾಸಾದವರು ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದೆ. ಆರ್ ಆರ್ ಸಿ ರೈಲ್ವೆ ಇಲಾಖೆಯ ಹುದ್ದೆಗೆ ನಿಮಗೆ ಅರ್ಜಿ ಹಾಕಲು ಆಸಕ್ತಿ ಇದ್ದರೆ ಈ ಮಾಹಿತಿ ಕೊನೆಯವರೆಗೂ ಓದಿ, ಅರ್ಜಿ ಹಾಕುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಪ್ರತಿಯೊಬ್ಬರಿಗೂ ಸರ್ಕಾರಿ ಹುದ್ದೆಯನ್ನು ತೆಗೆದುಕೊಳ್ಳಬೇಕು ಅನ್ನುವ ಆಸೆ ಇರುತ್ತದೆ. ಆದರೆ ಕೆಲವು ತೊಂದರೆಗಳಿಂದ ಹೆಚ್ಚಿನ ಶಿಕ್ಷಣವನ್ನು ಓದಲು ಆಗಿರುವುದಿಲ್ಲ. ಅಂತವರಿಗೆ ಈ ಹುದ್ದೆ ಸೂಕ್ತವಾಗುತ್ತದೆ, ಏಕೆಂದರೆ ಈ ಹುದ್ದೆಗೆ ಅರ್ಜಿ ಹಾಕಲು ಕೇವಲ ಹತ್ತನೆಯ ತರಗತಿ ಪಾಸ್ ಆಗಿದ್ದರೆ ಸಾಕು ನೀವು ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆದು ಕೊಳ್ಳಬಹುದು. ಈ ಹುದ್ದೆಗೆ ಅರ್ಜಿ ಹಾಕಲು ಅಕ್ಟೋಬರ್ 23 ನೇ ತಾರೀಕು ಕೊನೆಯ ದಿನಾಂಕವಾಗಿದ್ದು, ಆಸಕ್ತಿ ಇರುವವರು ಆದಷ್ಟು ಬೇಗ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿರಿ. ನೀವು ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಈಗ ಸಲ್ಲಿಸಬೇಕು ಅನ್ನೋ ಮಾಹಿತಿ ಕೆಳಗಡೆ ಇದೆ.

 

ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಹಾಕುವ ಮೂಲಕ ಕೇವಲ 500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರನ್ನು ಪಡೆದುಕೊಳ್ಳಿ! ತಕ್ಷಣ ಅರ್ಜಿ ಹಾಕಿರಿ!

 

WhatsApp Group Join Now
Telegram Group Join Now       

ಸ್ನೇಹಿತರೆ ಕೇವಲ 10ನೇ ತರಗತಿ ಪಾಸ್ ಆಗಿ, ಗೌರ್ಮೆಂಟ್ ನೌಕರಿಯ ಆಸೆಯನ್ನು ಹೊಂದಿರುವವರಿಗೆ ಇದು ಒಂದು ಉತ್ತಮ ಅವಕಾಶ ಎಂದು ಹೇಳಬಹುದು. ಏಕೆಂದರೆ 3115 ಆರ್ ಆರ್ ಸಿ ಪೂರ್ವ ರೈಲ್ವೆ ಇಲಾಖೆಯಲ್ಲಿ (RRC Recruitment 2024) ಖಾಲಿ ಇರುವ ಹುದ್ದೆಗಳಿಗೆ ಅತಿ ಸೂಚನೆಯನ್ನು ಹೊರಡಿಸಲಾಗಿದೆ. ಈ ಅಧಿಸೂಚನೆಯಲ್ಲಿ ಈ ಹುದ್ದೆಗೆ ನಿಗದಿಪಡಿಸಿದ ಅರ್ಹತೆಗಳೇನು, ಅರ್ಜಿ ಹಾಕಲು ಬೇಕಾಗುವ ದಾಖಲೆಗಳೇನು ಮತ್ತು ಅರ್ಜಿ ಶುಲ್ಕ ಹಾಗೂ ಈ ಹುದ್ದೆಗೆ ನೀಡುವ ವೇತನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ಈ ರೀತಿ ಇನ್ನು ಹಲವಾರು ಹೊಸ ಹೊಸ ಸರ್ಕಾರ ಹುದ್ದೆಗಳ ಅಧಿಸೂಚನೆಗಳ ಬಗ್ಗೆ ಮಾಹಿತಿ ಬೇಕಾದಲ್ಲಿ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಮಾಡಿಕೊಳ್ಳಬಹುದು ಮತ್ತು ನಮ್ಮ ವೆಬ್ ಸೈಟ್ ಅನ್ನು ಫಾಲೋ ಮಾಡಿಕೊಳ್ಳಬಹುದು.

RRC Recruitment 2024

RRC ರೈಲ್ವೆ ಇಲಾಖೆ ನೇಮಕಾತಿ (RRC Recruitment 2024) :

ಹೌದು ಸ್ನೇಹಿತರೆ ಆರ್ ಆರ್ ಸಿ ಪೂರ್ವ ರೈಲ್ವೆ ಇಲಾಖೆಯು ಖಾಲಿ ಇರುವ 3115 ಅಪ್ರೆಂಟಿಸ್ ಹುದ್ದೆಗಳಿಗೆ ಆದಿಶೂಚನೆಯನ್ನು ಹೊರಡಿಸಿ, ಅರ್ಜಿ ಹಾಕಲು ಕೂಡ ಆನ್ಲೈನ್ ಅಲ್ಲಿ ಅವಕಾಶವನ್ನು ನೀಡಿದೆ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ 23 ಅರ್ಜಿ ಹಾಕಲು ಕೊನೆಯ ದಿನಾಂಕವಾಗಿದೆ. ಹತ್ತನೆಯ ತರಗತಿ ಪಾಸ್ ಆಗಿರುವ ಯಾವುದೇ ವಿದ್ಯಾರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಲು ಆಸಕ್ತಿ ಇದ್ದರೆ ಕೆಳಗೆ ಕೊಟ್ಟಿರುವ ಅರ್ಜಿ ಹಾಕುವ ವಿಧಾನವನ್ನು ನೋಡಿಕೊಂಡು ಅರ್ಜಿ ಹಾಕಬಹುದು.

ಸ್ನೇಹಿತರೆ ಈ ಆರ್ ಆರ್ ಸಿ ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿ ಹಾಕಲು ನೀವು ಅಂತರಾಷ್ಟ್ರೀಯ ವ್ಯಾಪಾರ ಪ್ರಮಾಣ ಪತ್ರ ಪಡೆದಿರಬೇಕು ಮತ್ತು ಇದಕ್ಕೆ ಸಂಬಂಧಪಟ್ಟ ಐಟಿಐ ಕೋರ್ಸ್ ಅನ್ನು ಮುಗಿಸಿರಬೇಕು. ಈ ಹುದ್ದೆಗೆ ಸಂಬಂಧಪಟ್ಟರುವ ಕೆಲವು ಪ್ರಮುಖ ವಿವರಗಳನ್ನು ನಾವು ಕೆಳಗೆ ನೀಡಿದ್ದೇವೆ.

RRC Recruitment 2024

RRC ರೈಲ್ವೇ ಹುದ್ದೆಗಳ ವಿವರ :

  • ಇಲಾಖೆ : RRC ರೈಲ್ವೆ ಇಲಾಖೆಯಲ್ಲಿ
  • ಖಾಲಿ ಇರುವ ಹುದ್ದೆಗಳು – 3115 ಹುದ್ದೆಗಳು
  • ಅರ್ಹತೆ – SSLC ಜೊತೆಗೆ ITI
  • ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ದುಕೊಳ್ಳಲಾಗುತ್ತದೆ.

 

ಹಿಂದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ ಮತ್ತು ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿದವರಿಗೆ ರೇಷನ್ ಕಾರ್ಡ್ಗಳ ವಿತರಣೆ! ಯಾವಾಗ ಇಲ್ಲಿದೆ ಮಾಹಿತಿ!

 

RRC ರೈಲ್ವೆ ಹುದ್ದೆಯ ಹೆಚ್ಚಿನ ವಿವರಗಳು (RRC Recruitment 2024) :

ಆರ್ ಆರ್ ಸಿ ರೈಲ್ವೆ ಇಲಾಖೆಯ ಖಾಲಿ ಇರುವ 3115 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದ್ದು, ಹುದ್ದೆಗಳನ್ನು ಭಾರತದಾದ್ಯಂತ ನೀಡಲಾಗುತ್ತದೆ ಸಲ್ಲಿಸಿದ ಅರ್ಜಿಗಳಲ್ಲಿ ಮೆರಿಟ್ ನ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುಟ್ಟಿಗೆ ಅರ್ಜಿ ಹಾಕಲು ಇನ್ನಿತರ ಹೆಚ್ಚಿನ ಮಾಹಿತಿ ಇಲ್ಲಿದೆ.

ಶೈಕ್ಷಣಿಕ ಅರ್ಹತೆಗಳು : ಅರ್ಜಿ ಹಾಕುವವರು 10ನೆಯ ತರಗತಿ ಪಾಸ್ ಆಗುವುದರ ಜೊತೆಗೆ ಈ ಹುದ್ದೆಗೆ ಸಂಬಂಧಪಟ್ಟ ITI ಕೋರ್ಸ್ ಅನ್ನು ಮುಗಿಸಿರಬೇಕು ಮತ್ತು ಅಂತರಾಷ್ಟ್ರೀಯ ವ್ಯಾಪಾರ ಪ್ರಮಾಣ ಪತ್ರವನ್ನು ಪಡೆದಿರಬೇಕು.

ವಯೋಮಿತಿ : ಈ ಹುದ್ದೆಗೆ ಅರ್ಜಿ ಹಾಕಲು ಆಸಕ್ತಿ ಇರುವ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ 18 ರಿಂದ 24 ವರ್ಷದ ವಯಸ್ಸಿನ ಒಳಗಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

ವೇತನ : ಸ್ನೇಹಿತರೆ ಈ RRC ರೈಲ್ವೆ ಇಲಾಖೆಯ ಅಪ್ರೆಂಟಿಸ್ ಹುದ್ದೆಗಳಿಗೆ ರೈಲ್ವೆ ಇಲಾಖೆ ನಿಗದಿ ಮಾಡಿರುವ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ : ಈ ಹುದ್ದೆಗಳಿಗೆ ಅರ್ಜಿ ಹಾಕಿದ ನಂತರ ಸಾಮಾನ್ಯ ವರ್ಗದ ಅರ್ಜಿದಾರರು ₹100 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ಪಡೆಯುವುದಿಲ್ಲ.

ಆಯ್ಕೆ ಪ್ರಕ್ರಿಯೆ : ಈ ಹುದ್ದೆಗಳಿಗೆ ಕೊನೆಯ ದಿನಾಂಕದ ಒಳಗೆ ಅರ್ಜಿ ಹಾಕಿದ, ಎಲ್ಲಾ ಆಸಕ್ತಿ ಇರುವವರು ಅರ್ಜಿ ಹಾಕಿದ ನಂತರ ಅವರು ಪಡೆದಿರುವ ಮೆರಿಟ್ ನ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

RRC Recruitment 2024

ಪ್ರಮುಖ ದಿನಾಂಕಗಳು (RRC Recruitment 2024) :

  • ಅರ್ಜಿ ಹಾಕಲು ಆರಂಭವಾದ ದಿನಾಂಕ – 24 ಸೆಪ್ಟೆಂಬರ್ 2024
  • ಅರ್ಜಿ ಹಾಕಲು ಕೊನೆಯ ದಿನಾಂಕ – 23 ಅಕ್ಟೋಬರ್ 2024

 

RRC ರೈಲ್ವೆ ಹುದ್ದೆಗೆ ಅರ್ಜಿ ಹಾಕುವುದು ಹೇಗೆ ?

ಸ್ನೇಹಿತರೆ ಆರ್‌ಆರ್‌ಸಿ ಪೂರ್ವ ರೈಲು ಇಲಾಖೆಯಲ್ಲಿ ಖಾಲಿ ಇರುವ 3115 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಲು ಆನ್ಲೈನ್ ಮೂಲಕ ಅವಕಾಶ ನೀಡಲಾಗಿದೆ. ಆಸಕ್ತಿ ಇರುವ ಮೇಲೆ ನೀಡಿದ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಗಿಯುವುದರೊಳಗೆ ಅರ್ಜಿ ಸಲ್ಲಿಸಬಹುದು.

 

          ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಮೇಲೆ ನೀಡಿದ RRC ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ನೀಡಿ. ನಂತರ ಅಲ್ಲಿ ಹುದ್ದೆಗೆ ಅಪ್ಲೈ ಮಾಡಿ ಅನ್ನುವ ಆಯ್ಕೆ ಕಾಣುತ್ತದೆ ಅದರ ಮೇಲೆ ಒತ್ತಿ ಅಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳ ವಿವರಗಳನ್ನು ಭರ್ತಿ ಮಾಡಿ, ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿರಿ. ನಿಮಗೆ ಮೊಬೈಲಲ್ಲಿ ಅರ್ಜಿ ಹಾಕಲು ಬರುವುದಿಲ್ಲ ಅಂದರೆ ನಿಮ್ಮ ಹತ್ತಿರದ ಯಾವುದಾದರೂ ಆನ್ಲೈನ್ ಸೆಂಟ್ರಲ್ಲಿ ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಸ್ನೇಹಿತರೆ ಆರ್ ಆರ್ ಸಿ ರೈಲ್ವೆ ಇಲಾಖೆ ಖಾಲಿ ಇರುವ 3115 ಹುದ್ದೆಗಳ ವೇತನ, ಶೈಕ್ಷಣಿಕ ಅರ್ಹತೆ, ಅರ್ಜಿಯ ಶುಲ್ಕ ಮತ್ತು ಅರ್ಜಿ ಹಾಕುವ ವಿಧಾನದ ಬಗ್ಗೆ ಈ ಲೇಖನವು ನಿಮಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಿದೆ ಎಂದು ಭಾವಿಸುತ್ತೇನೆ.

 

Leave a Comment