SBI home loan 2024 : SBI ಬ್ಯಾಂಕ್ ಅಲ್ಲಿ ಗೃಹ ಸಾಲ ಪಡೆಯುವವರಿಗೆ ಸಿಹಿ ಸುದ್ದಿ! ಗೃಹ ಸಾಲಕ್ಕೆ ಹೇಗೆ ಅರ್ಜಿ ಹಾಕಬೇಕು!

SBI home loan 2024 : ಸ್ನೇಹಿತರೆ ಈ ಲೇಖನವು ನಿಮಗೆ SBI ಬ್ಯಾಂಕ್ ಅಲ್ಲಿ ಹೋಮ್ ಲೋನ್ ಹೇಗೆ ಪಡೆಯಬಹುದು ಮತ್ತು ಹೋಮ್ ಲೋನ್ ಬಡ್ಡಿದರ ಎಸ್ಟು, ಹೋಮ್ ಪಡೆಯಲು ಅರ್ಹತೆಗಳು ಏನಿರಬೇಕು ಅನ್ನುವ ವಿಷಯದ ಕುರಿತು ಮಾಹಿತಿಯನ್ನು ಒದಗಿಸುತ್ತದೆ. SBI ಬ್ಯಾಂಕ್ ನಿಂದ ಗೃಹ ಸಾಲ ಪಡೆಯುವುದು ತುಂಬಾ ಸುಲಭ. ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹೋಮ್ ಲೋನ್ ಪಡೆಯಲು ಆನ್ಲೈನ್ ಅಲ್ಲಿ ಕೂಡ ಅವಕಾಶ ಮಾಡಿ ಕೊಟ್ಟಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಗೃಹ ಸಾಲ ಹೇಗೆ ಪಡೆಯಬೇಕು ಮತ್ತು ಗೃಹ ಸಾಲ ಪಡೆಯುವ ಮುನ್ನ ಏನೆಲ್ಲಾ ಮುನ್ನೆಚ್ಚರಿಕೆ ಗಳನ್ನು ತೆಗೆದುಕೊಳ್ಳಬೇಕು ಅನ್ನುವ ವಿಷಯ ಇಲ್ಲಿದೆ.

ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ಸ್ವಂತ ಮನೆ ಕಟ್ಟಬೇಕು ಅನ್ನುವುದು ಪ್ರತಿಯೊಬ್ಬರ ಕನಸು. ಅದ್ದರಿಂದ ಹಲವು ಜನ ಮನೆ ಕಟ್ಟಲು ಹೆಚ್ಚಿನ ಬಡ್ಡಿ ದರದ ಸಾಲ ಮಾಡಿ, ಅದನ್ನು ತೀರಿಸಲು ಕಷ್ಟಪಡುತ್ತಾರೆ. ಅಂತವರ ಸಲುವಾಗಿ SBI ಬ್ಯಾಂಕ್ ಅಲ್ಲಿ ಕಡಿಮೆ ಬಡ್ಡಿದರದಲ್ಲಿ ಹೇಗೆ ಗೃಹ ಸಾಲ (SBI home loan 2024) ಪಡೆಯಬಹುದು, ಅದಕ್ಕೆ ಬೇಕಾಗುವ ದಾಖಲೆಗಳು ಏನು, ಗೃಹ ಸಾಲ ಪಡೆಯುವುದರಿಂದ ಪ್ರಯೋಜನಗಳೇನು ಇನ್ನಿತರ ಗೃಹ ಸಾಲಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

 

ಹೊಸ ರೇಷನ್ ಕಾರ್ಡ್ ಗೆ ಮತ್ತು ತಿದ್ದುಪಡಿಗೆ ಅರ್ಜಿ ಯಾವಾಗ ಆರಂಭ ಮತ್ತು ಹೊಸ ಕಾರ್ಡ್ ಗಳ ವಿತರಣೆ ಯಾವಾಗ ಇಲ್ಲಿದೆ ವಿವರ!

 

WhatsApp Group Join Now
Telegram Group Join Now       

ಪ್ರತಿ ಇದೆ ರೀತಿಯ ಹುದ್ದೆಗಳಿಗೆ ಸಂಬಂಧಿಸಿದ, ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ, ವಿಧ್ಯಾರ್ಥಿಗಳ ಸ್ಕಾಲರ್ಷಿಪ್ ಗೆ ಸಂಬಂಧಿಸಿದ ಮತ್ತು ರೇಷನ್ ಕಾರ್ಡ್ ಅರ್ಜಿ ಹಾಗೂ ಗ್ಯಾರಂಟೀ ಯೋಜನೆಗಳಿಗೆ ಸಂಭಂಧಿಸಿದ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಫಾಲೋ ಮಾಡಿ ಮತ್ತು ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿರಿ.

SBI home loan 2024

SBI ಹೋಮ್ ಲೋನ್ ಬಡ್ಡಿದರ ( SBI home loan 2024) :

SBI ಬ್ಯಾಂಕ್ ಅಲ್ಲಿ ಗೃಹ ಸಾಲವನ್ನು ನೀಡುವಾಗ ನೀವು ಪಡೆಯುವ ಸಾಲದ ಪ್ರಕಾರ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ನೋಡಿ ಬಡ್ಡಿ ದರವನ್ನು ನೀಡಲಾಗುತ್ತದೆ. ಭಾರತೀಯ ಸ್ಟೇಟ್ ಬ್ಯಾಂಕ್ ಅಲ್ಲಿ ಸಾಮಾನ್ಯವಾಗಿ ಬಡ್ಡಿ ದರವು 8.50% ನಿಂದ ಶುರುವಾಗುತ್ತದೆ. ನೀವೇನಾದರೂ ಕ್ರೆಡಿಟ್ ಗೆ ಹೊಸಬರಾಗಿದ್ದಾರೆ ಮತ್ತು ನಿಮ್ಮ ಸ್ಕೋರ್ ಕಡಿಮೆ ಇದ್ದರೆ ನೀವು ಸ್ವಲ್ಪ ಜಾಸ್ತಿ ಬಡ್ಡಿ ದರದಲ್ಲಿಯೂ ಸಾಲ ಪಡೆಯಬಹುದು. ನಿಮ್ಮ cibil ಸ್ಕೋರ್ ಏನಾದರೂ 800 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ನೀವು ಭಾರತೀಯ ಸ್ಟೆಟ್ ಬ್ಯಾಂಕ್ (SBI) ನಿಂದ ಕಡಿಮೆ ಬಡ್ಡಿ ದರದಲ್ಲಿ ನೀವು ಗೃಹ ಸಾಲ ಪಡೆಯಬಹುದು.

 

SBI ಹೋಮ್ ಲೋನ್ ಪ್ರಯೋಜನಗಳು :

ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮೂಲಕ ನೀವು ಗೃಹ ಸಾಲ ಪಡೆದರೆ ಉಳಿದ ಬ್ಯಾಂಕ್ ಗಳಿಗಿಂತ ಕೆಲವು ಜಾಸ್ತಿ ಲಾಭಗಳನ್ನು ಪಡೆಯಬಹುದು. SBI ಅಲ್ಲಿ ನೀವು ಬಹಳ ಸುಲಭವಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದಲ್ಲದೆ, SBI ಬ್ಯಾಂಕ್ ನಿಮಗೆ ಸಾಲದ ಪೂರ್ವಪಾವತಿಗೆ ಯಾವುದೇ ದಂಡ ವಿಧಿಸುವುದಿಲ್ಲ.

SBI ತನ್ನ ಮಹಿಳಾ ಗ್ರಾಹಕರಿಗೆ ಗೃಹ ಸಾಲದ ಮೇಲೆ ಹೆಚ್ಚಿನ ರಿಯಾಯಿತಿ ನೀಡುತ್ತದೆ. ಈ ಬ್ಯಾಂಕ್ ನಿಮಗೆ 30 ವರ್ಷಗಳ ತನಕ ದೀರ್ಘಾವಧಿ ಮರುಪಾವತಿ ಆಯ್ಕೆಯನ್ನು ನೀಡುತ್ತದೆ. ಭಾರತೀಯ ಸ್ಟೇಟ್ ಬ್ಯಾಂಕ್ ನ ಇನ್ನೊಂದು ಒಳ್ಳೆಯ ವಿಚಾರ ಅಂದರೆ ಇದು 18 ರಿಂದ 70 ವರ್ಷದ ತನಕ ವಯಸ್ಸು ಹೊಂದಿದವರಿಗೆ ಗೃಹ ಸಾಲ ಪಡೆಯಲು ಅವಕಾಶ ನೀಡಿದೆ.

SBI home loan 2024

SBI ಹೋಮ್ ಲೋನ್ ಪಡೆಯಲು ಅರ್ಹತೆಗಳು :

SBI ಬ್ಯಾಂಕ್ ಅಲ್ಲಿ ಗೃಹ ಸಾಲ (SBI home loan 2024) ಪಡೆಯಲು ದೇಶದ ಎಲ್ಲರಿಗೂ ಕೂಡ ಅವಕಾಶ ನೀಡಲಾಗಿದೆ. ಯಾವುದೇ ಪ್ರಮುಖ ಅಥವಾ ವಿಶೇಷ ಮಾನದಂಡಗಳನ್ನು ಹೊಂದಿರಬೇಕಾಗಿಲ್ಲ. SBI ತನ್ನ ಗ್ರಾಹಕರಿಗೆ ಉದ್ಯೋಗ ಮತ್ತು ವಯಸ್ಸಿನ ಆಧಾರದ ಮೇಲೆ ಗೃಹ ಸಾಲ ನೀಡುತ್ತದೆ.

  • ಗೃಹ ಸಾಲ ಪಡೆಯಲು ಕನಿಷ್ಠ 18 ವರ್ಷ ದಾಟಿರಬೇಕು.
  • ಗೃಹ ಸಾಲ ಪಡೆಯಲು ಗರಿಷ್ಠ 70 ವರ್ಷಕ್ಕಿಂತ ಕಡಿಮೆ ವಯಸು  ಹೊಂದಿರಬೇಕು.
  • ಉದ್ಯೋಗ ಮಾಡುತ್ತಿರುವುದರ ದಾಖಲೆ ಹೊಂದಿರಬೇಕು.

 

SBI ಗೃಹ ಸಾಲಕ್ಕೆ ಅಗತ್ಯ ದಾಖಲೆಗಳು :

ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಗೃಹ ಸಾಲ ನೀಡಲು ಕೆಲವು ಅರ್ಹತಾ ಮಾನದಂಡ ಮತ್ತು ಕಡ್ಡಾಯ ದಾಖಲೆಗಳನ್ನು ನಿಗದಿಪಡಿಸಿದೆ ಅವುಗಳು..

  • ಅರ್ಜಿದಾರರ ಮೂರು ಪಾಸ್ಪೋರ್ಟ್ ಅಳತೆಯ ಫೋಟೋ.
  • ಅರ್ಜಿದಾರರ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್..).
  • ಅರ್ಜಿದಾರರ ಆಸ್ತಿ ಪತ್ರಗಳಿಗೆ ಸಂಬಂಧಿಸಿದ ದಾಖಲೆಗಳು.
  • ಅರ್ಜಿದಾರರ ಹಿಂದಿನ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • ಅರ್ಜಿದಾರರ ಕಳೆದ 3 ತಿಂಗಳ ವೇತನದ ಪತ್ರ ಮತ್ತು ಐಟಿಆರ್.

 

ಗೃಹ ಲಕ್ಷ್ಮಿ ಯೋಜನೆಯ 12 ಮತ್ತು 13 ನೆಯ ಕಂತಿನ ಹಣ ಪಡೆಯಲು ಮತ್ತು ಪೆಂಡಿಂಗ್ ಹಣ ಪಡೆಯಲು ಏನು ಮಾಡಬೇಕು! ಇಲ್ಲಿದೆ ಮಾಹಿತಿ!

 

   ಆನ್ಲೈನ್ ಹೋಮ್ ಲೋನ್ ಅರ್ಜಿ ಇಲ್ಲಿ ಒತ್ತಿ

 

SBI ಹೋಮ್ ಲೋನ್ ಆನ್ಲೈನ್ ಅಲ್ಲಿ ಹೇಗೆ ಅರ್ಜಿ ಹಾಕಬೇಕು : 

ಸ್ನೇಹಿತರೆ SBI ತನ್ನ ಗ್ರಾಹಕರಿಗೆ ಆನ್ಲೈನ್ ಮೂಲಕವೇ ಗೃಹ ಸಾಲಕ್ಕೆ (SBI home loan 2024) ಅರ್ಜಿ ಹಾಕಲು ಅವಕಾಶ ನೀಡಿದೆ. ಗ್ರಾಹಕರು yono ಅಪ್ಲಿಕೇಶನ್ ಮೂಲಕ ಅಥವಾ SBI ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲಿದೆ ಅದರ ಮಾಹಿತಿ.

SBI home loan 2024

  • SBI ನ ಗೃಹ ಸಾಲಕ್ಕೆ ಅನ್ವಯ ಮಾಡಲು ಇರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • ಆನ್ಲೈನ್ ಅಲ್ಲಿ ಸಾಲಕ್ಕೆ ಅರ್ಜಿ ಹಾಕಿ ಅನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳ ವಿವರ ಭರ್ತಿ ಮಾಡಿ ಮತ್ತು ಅಪ್ಲೋಡ್ ಮಾಡಿ
  • ಕೊನೆಯದಾಗಿ ಎಲ್ಲಾ ವಿವರಗಳನ್ನು ಸರಿಯಾಗಿ ಇನ್ನೊಮ್ಮೆ ಚೆಕ್ ಮಾಡಿಕೊಂಡು ಅರ್ಜಿಯನ್ನು ‘ ಸಲ್ಲಿಸು ‘ ಅನ್ನುವುದರ ಮೇಲೆ ಪೂರ್ಣಗೊಳಿಸಿ.

 

ನೀವು ಭಾರತೀಯ ಸ್ಟೇಟ್ ಬ್ಯಾಂಕ್ (SBI) ನ ಗೃಹ ಸಾಲಕ್ಕೆ yono ಆ್ಯಪ್ ಮೂಲಕವೂ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದು. ನಿಮಗೆ ಆನ್ಲೈನ್ ಅಲ್ಲಿ ಅರ್ಜಿ ಹಾಕಲು ಬರುವುದಿಲ್ಲ ಅಂದರೆ ನಿಮ್ಮ ಹತ್ತಿರದ SBI ಬ್ಯಾಂಕ್ ಗೆ ಭೇಟಿ ನೀಡಿ ಗೃಹ ಸಾಲದ ಬಗ್ಗೆ ವಿಚಾರಿಸಿ ಅರ್ಜಿಯನ್ನು ಸಲ್ಲಿಸಿ.

 

ಸ್ನೇಹಿತರೆ ಈ ಲೇಖನವು ಭಾರತೀಯ ಸ್ಟೇಟ್ ಬ್ಯಾಂಕ್ ಅಲ್ಲಿ ಸುಲಭವಾಗಿ ಹೇಗೆ ಗೃಹ ಸಾಲ (SBI home loan 2024) ಪಡೆಯಬೇಕು, ಸಾಲ ಪಡೆಯಲು ಏನೆಲ್ಲಾ ಅರ್ಹತೆಗಳು ಇರಬೇಕು, ದಾಖಲೆಗಳನ್ನು ಏನು ನೀಡಬೇಕು ಮತ್ತು ಗೃಹ ಸಾಲಕ್ಕೆ ಹೇಗೆ ಆನ್ಲೈನ್ ಅರ್ಜಿ ಹಾಕಬೇಕು ಅನ್ನುವ ವಿಷಯದ ಮಾಹಿತಿ ಒದಗಿಸಿದೆ ಎಂದು ಭಾವಿಸುತ್ತೇನೆ.

 

WhatsApp group –https://chat.whatsapp.com/KGDCXFjnjPU4usSKVXrxKo

Leave a Comment